ಜಗತ್ತಿನಲ್ಲಿ ಮೂರನೆಯ ಅಲೆಯ ಹೊಡೆತ ತೀವ್ರವಾಗಿದೆ.  ಓಮೈಕ್ರಾನ್ ಸೌಮ್ಯ ಎಂದರೂ ಇತರ ರೂಪಾಂತರಿಗಳ ಕಾಟ ನಿಂತಿಲ್ಲ. ಗುರುವಾರ ದಿನದ 24 ಗಂಟೆಗಳಲ್ಲಿ 38.1 ಲಕ್ಷ ಮಂದಿ ಕೊರೋನಾ ಸೋಂಕಿಗೀಡಾದರೆ, 9.8 ಸಾವಿರದಷ್ಟು ಜನರು ಸಾವಿಗೀಡಾದರು. ಹೀಗಾಗಿ ಒಟ್ಟು ಸೋಂಕಿತರ ಸಂಖ್ಯೆಯು 34,29,15,983 ಮುಟ್ಟಿದೆ. ಹಾಗೆಯೇ ಸಾವು ಮೊತ್ತವು 55,92,779ಆಗಿದೆ.

ಭಾರತದಲ್ಲಿ ಕೊರೋನಾ ಮೂರನೆಯ ಅಲೆಯು ಅಬ್ಬರ ಎಬ್ಬಿಸಿದೆ. ನಿನ್ನೆ ದಿನ ನಮ್ಮ ಜನ 3,17,532 ಮಂದಿ ಹೊಸದಾಗಿ ಕೊರೋನಾ ಸೋಂಕಿಗೊಳಗಾದರು. ಅಲ್ಲಿಗೆ ದೇಶದ ಒಟ್ಟು ಸೋಂಕಿತರ ಸಂಖ್ಯೆಯು 3,85,63,632 ದಾಟಿತು. ನಿನ್ನೆ ಗುರುವಾರ ದಿನ 723 ನಮ್ಮ ಜನ ಕೊರೋನಾ ಪೀಡೆಗೆ ಬಲಿಯಾದರು. ಇದರೊಂದಿಗೆ ದೇಶದಲ್ಲಿ ಕೊರೋನಾ ಸಾವು‌ ಕಂಡವರ ಒಟ್ಟು ‌ಸಂಖ್ಯೆಯು 4,88,422 ಮುಟ್ಟಿತು.

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 29 ಜನ ಕೋವಿಡ್‌ ಸಾವು ಕಂಡಿದ್ದಾರೆ. ಇದರಿಂದಾಗಿ ಒಟ್ಟು ಸಾವಿಗೀಡಾದವರ ಸಂಖ್ಯೆಯು 38,515 ತಲುಪಿತು. ನಿನ್ನೆ ಗುರುವಾರ ರಾಜ್ಯದಲ್ಲಿ ಸೋಂಕಿಗೀಡಾದವರ ಸಂಖ್ಯೆಯು 47,754. ಇದೂ ಸೇರಿ ಒಟ್ಟು ಸೋಂಕಿತರ ಸಂಖ್ಯೆಯು ಈಗ 33,76,953 ದಾಟಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ದಿನದ 24 ಗಂಟೆಗಳಲ್ಲಿ ಕೋವಿಡ್‌ ಸಾವು 1   ಸಂಭವಿಸಿದೆ. ಸಾವು ಸಂಖ್ಯೆ 1,715ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ ಸೋಂಕು ತಗುಲಿದವರ ಸಂಖ್ಯೆ 974 ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆಯು 1,25,262 ಆಯಿತು.

ಉಡುಪಿ ಜಿಲ್ಲೆಯಲ್ಲಿ ನಿನ್ನೆ ದಿನ ಕೊರೋನಾ ಸಾವು ಸಂಭವಿಸಿಲ್ಲ. ಒಟ್ಟು ಸಾವಿನ ಸಂಖ್ಯೆಯು 491ರಲ್ಲಿದೆ. ಗುರುವಾರದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸೋಂಕಿಗೆ ಈಡಾದವರ ಸಂಖ್ಯೆಯು 767. ಇದೂ ಸೇರಿ ಸೋಂಕಿತರ ಸಂಖ್ಯೆಯು ಈಗ 83,876 ಆಗಿದೆ.