ಮಂಗಳೂರು: ನಗರದ ಪಳ್ನೀರು ವಾರ್ಡಿನ ಡೈನೆಸ್ಟಿ ಅಪಾರ್ಟ್ ಮೆಂಟ್ ನಲ್ಲಿ ಸುಮಾರುರು 104 ಮನಯಿದ್ದು ಅಪಾರ್ಟ್ ಮೆಂಟ್ ನ ಭಾಗದಲ್ಲಿರುವ ತೋಡಿನಲ್ಲಿ ನೀರು ಹರಿದ ರಭಸಕ್ಕೆ ಅಪಾರ್ಟ್ ಮೆಂಟ್ ನ ಜನರೇಟರ್ ಮತ್ತು ಟ್ರಾನ್ಸ್ ಫಾರ್ಮರ್ ಮತ್ತು ಇತರ ಸಾಮಾಗ್ರಿಗಳು ಕೊಚ್ಚಿ ಹೋಗಿದ್ದು, ದೊಡ್ಡ ಅನಾಹುತ ಸಂಭವಿಸುವ ಹಂತದಲ್ಲಿದೆ, ಇಲ್ಲಿಗೆ ಭೇಟಿ ನೀಡಿದ ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾ ಇವರು ಸಹಾಯಕ ಇಂಜಿನಿಯರ್ ಮಹಾನಗರ ಪಾಲಿಕೆ ಆಯುಕ್ತರು ಒಳಚರಂಡಿ ವಿಭಾಗದ ಅರೋಗ್ಯ ಅಧಿಕಾರಿಗಳನ್ನು ಮಾತುಕತೆಗೆ ಕರೆಯಿಸಿ ಈ ಬಗ್ಗೆ ಮಾತುಕತೆ ನಡೆಸಿ ಈ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದರೆ ಕಟ್ಟಡವೇ ಕುಸಿದು ಬೀಳುವ ಸಂಭವವಿದೆ. ರಭಸಕ್ಕೆ ಕುಸಿದು ಬಿದ್ದಂತಹ ತೋಡುಗಳನ್ನು ಸರಿಪಡಿಸಬೇಕೆಂದು ಹಾಗೂ ಸ್ಥಳೀಯ ನಿವಾಸಿಗಳು ಅಪಾರ್ಟ್ಮೆಂಟ್ ಬದಿಯ ತೋಡನ್ನು ಸರಿಪಡಿಸಿಲ್ಲ ಎಂದು ಈ ಬಗ್ಗೆ ದೂರು ನೀಡಿದ್ದರೂ ಸರಿಪಡಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಈ ಭಾಗದಲ್ಲಿ ಕುಸಿದು ಬಿದ್ದಿರುವಂತಹ ತೋಡನ್ನು ಕೂಡಲೇ ಕಟ್ಟಿಸಿಕೊಡಬೇಕೆಂದು ತೋಡಿನ ಅಗಲ ಕಡಿಮೆಯಾಗಿರುವುದರಿಂದ ಖಾಸಗಿ ಸ್ಥಳಗಳಿಗೆ ನೀರು ಹರಿದು ಅನಾಹುತ ಸಂಭವಿಸಿದೆ ಎಂದು ಐವನ್ ಡಿʼಸೋಜಾರವರು ತಿಳಿಸಿದ್ದಾರೆ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ,
ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ಅಮೃತ್ ಕದ್ರಿ, ಕ್ರಿಸ್ಟನ್ ಮಿನೇಜಸ್, ಮನಪಾ ಜೂನಿಯರ್ ಇಂಜಿನಿಯರ್ ನಿತ್ಯಾನಂದ, ಸ್ಥಳೀಯರಾದ ಡೇವಿಸ್ ಜೋಶ್, ಲೀನಾ ಡಿಸೋಜಾ, ಜಯಶ್ರೀ ಮುಂತಾದವರು ಉಪಸ್ಥಿತರಿದ್ದರು.