ತ್ರಿಪುರಾದ ಅಮತಾಲಿ ಬಜಾರ್‌ನಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಸುಸ್ಮಿತಾ ದೇವ್ ಮತ್ತು ಅವರ ಜೊತೆಗಿದ್ದವರ ಮೇಲೆ ಬಿಜೆಪಿ ಗೂಂಡಾಗಳು ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಅವರು ದೂರು ದಾಖಲಿಸಿದ್ದಾರೆ.
ತ್ರಿಪುರಾದಲ್ಲಿ ಪಕ್ಷ ಕಟ್ಟುವ ಹೊಣೆ ಹೊತ್ತು ಸಂಸದೆ ಸುಸ್ಮಿತಾ ದೇವ್ ಅವರು ಪ್ರಚಾರದಲ್ಲಿ ತೊಡಗಿದ್ದಾರೆ. ಸುಸ್ಮಿತಾರ ಕಾರನ್ನು ಧ್ವಂಸ ಮಾಡಲಾಗಿದೆ. ಅವರೊಂದಿಗೆ ಪ್ರಚಾರದಲ್ಲಿ ತೊಡಗಿದ್ದ ಟಿಎಂಸಿ ಕಾರ್ಯಕರ್ತರು ಮತ್ತು ಕಾಸಗಿ ಕಂಪೆನಿಯ ಕೆಲಸಗಾರರಾದ ಹತ್ತು ಜನರು ಗಾಯಗೊಂಡಿದ್ದಾರೆ. ಪೋಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುವುದಾಗಿ ಹೇಳಿದ್ದಾರೆ.