ರಶಿಯಾ ರಾಜಧಾನಿ ಮಾಸ್ಕೋದಿಂದ 270 ಕಿಲೋಮೀಟರ್ ದೂರದ ರಯಜಾನ್ ಪ್ರದೇಶದ ಗನ್ ಪೌಡರ್ ಕಾರ್ಖಾನೆಯಲ್ಲಿ ನಡೆದ ಸ್ಫೋಟದಿಂದ 16 ಜನರು ಸಾವಿಗೀಡಾಗಿದ್ದಾರೆ.
ಒಬ್ಬರು ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವಿನೊಂದಿಗೆ ಹೋರಾಡುತ್ತಿದ್ದಾರೆ. ಅಧಿಕೃತವಾಗಿ ಮೊದಲು 7 ಸಾವು, 9 ಜನ ನಾಪತ್ತೆ ಎಂದು ಹೇಳಲಾಗಿತ್ತು. 9 ಜನರು ಗುರುತಿಸಲಾಗಿದ ಅವಶೇಷ ದೊರೆತ ಮೇಲೆ ಅವರನ್ನೂ ಸಾವಿಗೀಡಾದವರ ಪಟ್ಟಿಗೆ ಸೇರಿಸಲಾಯಿತು.
170 ಜನ ತುರ್ತು ಸೇವಾ ಸಿಬ್ಬಂದಿ 50 ಅಗ್ನಿಶಾಮಕ ವಾಹನಗಳ ಜೊತೆಗೆ ಬೆಂಕಿ ನಂದಿಸುವ ಕೆಲಸ ಮಾಡಿದರು. ಇಡೀ ಕಾರ್ಖಾನೆ ಬೂದಿಯಾಗಿದೆ.