ಚಿಕ್ಕಮಗಳೂರಿನ ಆಟೋ ಚಾಲಕ ವಿನೋದ್ ಎಂಬ ಯುವಕ ಮಳೆಯ ನಡುವೆ ಎಲ್ಲರೂ ಕೈಕೊಟ್ಟ ಕಾರಣ 6,000 ಕಳೆದುಕೊಂಡಿದ್ದಾರೆ.

ಮುಕ್ತ ವಿಶ್ವವಿದ್ಯಾನಿಲಯಕ್ಕೆ ಬಾಡಿಗೆ ಹೋಗಿದ್ದಾರೆ. ಹಿಂತಿರುಗುವುದರೊಳಗೆ ವಿವಿ ಗೇಟ್ ಬಳಿಯ ಸೇತುವೆಯು ಮುರಿದಿದೆ. ಜಿಲ್ಲಾಡಳಿತ, ಅಗ್ನಿಶಾಮಕ ದಳದವರೆಲ್ಲ ಬಂದು ವಿದ್ಯಾರ್ಥಿಗಳನ್ನು ರಕ್ಷಿಸಿ ಆಚೆ ಮುಟ್ಟಿಸಿದರು.

ಆಟೋದ ವಿನೋದ್‌ಗೆ ಸಹಾಯ ಮಾಡುತ್ತೇವೆ ಎಂದ ಎಲ್ಲರೂ ಕೊನೆಗೆ ಮರೆತುಬಿಟ್ಟರು. ಸೇತುವೆ ರಿಪೇರಿ ಸದ್ಯ ಆಗದು. ದುಡಿಮೆಗೆ ಆಟೋ ಬೇಕು. ಕೊನೆಗೆ ವಿನೋದ್ ಅವರು ರೂಪಾಯಿ 6,000 ಸಾಲ ಮಾಡಿದರು. ಅದನ್ನು ಕ್ರೇನ್‌ಗೆ ಬಾಡಿಗೆ ನೀಡಿ ಆಟೋವನ್ನು ಈ ಕಡೆಗೆ ಎತ್ತಿಸಿ ಉಸಿರು ಬಿಟ್ಟರು.