ಮಹಿಳೆಯರ ಸ್ವಾವಲಂಬನೆ ಹಾಗೂ ಆದಾಯದಾಯಕ ಚಟುವಟಿಕೆಗೆ ಪ್ರೊತಾಹಿಸುವ ಉದ್ದೇಶದಿಂದ, ಮಂಗಳೂರು ಲೇಡಿಸ್ ಸರ್ಕಲ್ 82, ಕ್ರಿಮ್ಸನ್ ಯೋಜನೆಯಡಿ ಸ್ಯಾನಿಟರಿ ನ್ಯಾಪಕಿನ್ ಉತ್ಪಾದನ ಘಟಕವನ್ನು ಮಂಜೇಶ್ವರದ ಸ್ನೇಹಾಲಯ ಚಾರಿಟೇಬಲ್ (ರಿ.) ಸಂಸ್ಥೆಯಲ್ಲಿ ದಿನಾಂಕ 22 ಅಕ್ಟೋಬರ್ ರಂದು ಉದ್ಘಾಟಿಸಲಾಯಿತು. ಈ ನೂತನ ಘಟಕವನ್ನು ಸ್ನೇಹಾಲಯ ಚಾರಿಟೇಬಲ್ ಸಂಸ್ಥೆಯ ಸಂಸ್ಥಾಪಕರಾದ ಬ್ರದರ್ ಜೋಸೆಫ್ ಕ್ರಾಸ್ತಾರವರು ಉದ್ಘಾಟಿಸಿದರು. ಮಂಗಳೂರು ಲೇಡಿಸ್ ಸರ್ಕಲ್ ಇಂಡಿಯಾ ಏರಿಯಾ 13 ರ ಅಧ್ಯಕ್ಷರಾದ ಸಪ್ನಾ ಕುಶಲ್, ಉಪಾಧ್ಯಕ್ಷರಾದ ನಂದಿತಾ ಫೆರ್ನಾಂಡಿಸ್, ಮಂಗಳೂರು ಲೇಡೀಸ್ ಸರ್ಕಲ್ 82 ರ ಅಧ್ಯಕ್ಷರಾದ ಜೆನಿಫರ್ ಫೆರ್ನಾಂಡಿಸ್, ಮಂಗಳೂರು ರೌಂಡ್ ಟೇಬಲನ ಅಧ್ಯಕ್ಷರಾದ ರೊಯ್ಸ್ಟರ್ ಡಿಸೋಜ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಮಂಗಳೂರು ಲೇಡಿಸ್ ಸರ್ಕಲ್, ಲೇಡಿಸ್ ಸರ್ಕಲ್ ಇಂಡಿಯಾ ಇದರ ಭಾಗವಾಗಿದ್ದು. ರಾಜಕೀಯೇತರ ಹಾಗೂ ಪಂಧಿಯವಲ್ಲದ ಸಂಸ್ಥೆಯಾಗಿದ್ದು ಮಹಿಳಾ ಸಬಲೀಕರಣ, ಮಕ್ಕಳು ನಿರ್ಗತಿಕರು ಹಾಗೂ ಅವಕಾಶವಂಚಿತರಿಗಾಗಿ ಹಲವಾರು ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತದೆ. ಮಂಜೇಶ್ವರದ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್(ರಿ) ಕಳೆದ 12 ವರ್ಷಗಳಿಂದ ಯಾವುದೇ ಜಾತಿ, ಮತ, ಭೇಧವಿಲ್ಲದೆ ಮಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಅನಾಥ, ನಿರ್ಗತಿಕ ನಿರಾಶ್ರಿತರನ್ನು ಹಾಗೂ ಮನೋದೌರ್ಬಲ್ಯವನ್ನು ಹೊಂದಿದವರಿಗೆ ಅಶ್ರಯ ನೀಡಿ ಚಿಕಿತ್ಸೆ ಹಾಗೂ ಆಸರೆಯನ್ನು ನೀಡುತ್ತಿದೆ. ಮಾತ್ರವಲ್ಲದೇ ವಿವಿಧ ಚಟುವಟಿಕೆಗಳ ಮೂಲಕ ಅವರನ್ನು ಗುಣಪಡಿಸುವ ಪ್ರಯತ್ನವನ್ನು ಮಾಡಿ ಗುಣಮುಖರಾದವರನ್ನು ಹಾಗೂ ವಿಳಾಸ ಪತ್ತೆ ಹಚ್ಚಲ್ಪಟ್ಟವರನ್ನು ಅವರ ಕುಟುಂಬಕ್ಕೆ ಮರುಸೇರಿಸುವ ಕಾರ್ಯವನ್ನು ತನ್ನ ನಿಸ್ವಾರ್ಥ ಸೇವಾ ಕಾರ್ಯಕರ್ತರು ಹಾಗೂ ಉದಾರ ಮನಸ್ಸಿನ ದಾನಿಗಳ ಸಹಾಕರದಿಂದ ಯಶಸ್ವಿಯಾಗಿ ನಡೆಸುತ್ತಾ ಬರುತ್ತಿದೆ.
ಈ ರೀತಿಯಾಗಿ ಮಂಗಳೂರು ಲೇಡಿಸ್ ಸರ್ಕಲ್, ಲೇಡಿಸ್ ಸರ್ಕಲ್ ಇಂಡಿಯಾ , ಸ್ಯಾನಿಟರಿ ನ್ಯಾಪಕಿನ್ ಘಟಕವನ್ನು ಮಂಜೇಶ್ವರದ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್(ರಿ) ಸಂಸ್ಥೆಯ ಮಾನಸಿಕ ಅಸ್ವಸ್ಥರ ಪುನರ್ಚೇತನ ಕೇಂದ್ರದ ಮಹಿಳಾ ವಿಭಾಗದ ಸಹೋದರಿಯಾರಿಗಾಗಿ ಅನುಷ್ಟಾನ ಮಾಡಿರುತ್ತಾರೆ. ಈಗಾಗಲೇ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ಚೇತನ ಕೇಂದ್ರದ ಆಯ್ದ ಸಹೋದರರಿಯರಿಗೆ ಉತ್ಪಾದನ ತರಬೇತಿಯನ್ನು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ “ಸ್ನೇಹಿತೆ “ಎಂಬ ಹೆಸರಿನಡಿ ಗುಣಮಟ್ಟದ ಆರೋಗ್ಯಕರ ಕೈಗೆಟಕುವ ದರದ ಪರಿಸರಸ್ನೇಹಿ ಸ್ಯಾನಿಟರಿ ನ್ಯಾಪಕಿನ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಈ ಮೂಲಕ ಸಂಸ್ಥೆಯಲ್ಲಿ ಗುಣಮುಖರಾದ ನಿರಾಶ್ರಿತರಿಗೆ ಉತ್ಪಾದಕ ಚಟುವಟಿಕೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿರುತ್ತದೆ.