ಕಾಂಗ್ರೆಸ್ ಸರಕಾರ ಮತ್ತು ಜಿಲ್ಲೆಗೆ ಕೆಟ್ಟ ಹೆಸರು ತರಲು ಸಂಘ ಪರಿವಾರದ ಕೆಲವು ಶಕ್ತಿಗಳು ಮತೀಯ ಗೂಂಡಾಗಿರಿಯಲ್ಲಿ ತೊಡಗಿಕೊಂಡಿವೆ. ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಮಂತ್ರಿ ದಿನೇಶ್ ಗುಂಡೂರಾವ್ ಹೇಳಿದರು.
ಇಂತಾ ಮತೀಯ ಗೂಂಡಾಗಿರಿಯ ಜನರನ್ನು ಬಿಜೆಪಿಯವರು ಬೆಂಬಲಿಸುವುದಾದರೆ ಅವರನ್ನು ಕ್ರಿಮಿನಲ್ ಪಕ್ಷದವರು ಎಂದು ಕರೆಯಬೇಕಾಗುತ್ತದೆ ಎಂದೂ ಅವರು ಹೇಳಿದರು.
ಮಂಗಳೂರಿನ ಕಾಲೇಜಿನಲ್ಲಿ ಸೀಟು ಸಿಕ್ಕಿದೆ. ಹೋಗಲು ಮತೀಯ ಗೂಂಡಾಗಿರಿಯ ಭಯ ಎಂದು ಹಲವು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಜಿಲ್ಲೆ ಈ ನಾಚಿಕೆಗೇಡು ಸ್ಥಿತಿಯಲ್ಲಿ ಇರಬೇಕೆ ಎಂದು ಅವರು ಪ್ರಶ್ನಿಸಿದರು.