ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯ ಪಾವಂಜೆಯ ಬಳಿ ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಯು ಸೋಮವಾರ ರಾತ್ರಿ ನಡೆದಿದೆ.

ಮೃತ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ಬೆನೆಟ್ ಕರ್ಕಡ (67) ಎಂದು ಗುರುತಿಸಲಾಗಿದೆ. ಮೃತರು ಕಳೆದ ಹಲವಾರು ವರ್ಷಗಳಿಂದ ಕೃಷಿಕರಾಗಿದ್ದು ಕಳೆದ ಎರಡು ವರ್ಷದಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.

ಸೋಮವಾರ ರಾತ್ರಿ ತಮ್ಮ ಮನೆಯ ಸಮೀಪದ ಮುಲ್ಲಾಡಿ ಎಂಬಲ್ಲಿರುವ ಗದ್ದೆಯ ಬಳಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ಬೆಳಿಗ್ಗೆ ಬೆನೆಟ್ ಕರ್ಕಡ ಮನೆಗೆ ಬಾರದಿರುವುದನ್ನು ಕಂಡು ಸಂಶಯದಿಂದ ಮನೆಯವರು ಹುಡುಕಿಕೊಂಡು ಬಂದು ಬಾವಿಯೊಳಗೆ ಪರಿಶೀಲಿಸಿದಾಗ ಬೆನೆಟ್ ಕರ್ಕಡ ಶವ ಪತ್ತೆಯಾಗಿದ್ದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ತೇಜ್ ಪಾಲ್ ಮತ್ತಿತರರು ಸೇರಿ ಶವವನ್ನು ಬಾವಿಯಿಂದ ಹೊರಗೆ ತೆಗೆಯಲು ಸಹಕರಿಸಿದ್ದಾರೆ.

ಮುಲ್ಕಿ ಪೊಲೀಸ್ ಠಾಣೆಯಲ್ಲಿ ಮೃತರ ಸಂಬಂಧಿಕ ಜಾಯ್ಸ್ ಕರ್ಕಡ ನೀಡಿದ ದೂರಿನಂತೆ ಪೊಲೀಸ್ ರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.