ಮಣಿಪುರ: ಮೇ ಜೂನ್ ಜುಲಾಯಿ ತಿಂಗಳುಗಳಲ್ಲಿ ಮಣಿಪುರದಲ್ಲಿ ಕಾನೂನು ಎನ್ನುವುದೇ ಇರಲಿಲ್ಲ. ಮಣಿಪುರದ ಪೋಲೀಸರು ಅಸಮರ್ಥರು ಎಂದ ಸರ್ವೋಚ್ಚ ನ್ಯಾಯಾಲಯವು ಮಣಿಪುರದ ಡಿಜಿಪಿ ಅವರಿಗೆ ಸಮನ್ಸ್ ನೀಡಿತು.
ಸಿಜೆಐ ಡಿ. ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ. ಬಿ. ಪರ್ದಿವಾಲಾ, ಮನೋಜ್ ಮಿಶ್ರಾ ಅವರಿದ್ದ ಪೀಠವು ಸರಕಾರಗಳು ಮತ್ತು ಮಣಿಪುರದ ಪೋಲೀಸರು ಕೆಲಸಕ್ಕೆ ಬಾರದವರು ಎಂದು ಕಟುವಾಗಿ ಹೇಳಿತು.
ನಮ್ಮನ್ನು ಪೋಲೀಸರೇ ಗೂಂಡಾಗಳ ನಡುವೆ ಬಿಟ್ಟು ಹೋಗಿದ್ದಾರೆ ಎಂದು ಸಂತ್ರಸ್ತ ಮಹಿಳೆಯರು ಹೇಳಿದ್ದಾರೆ. ಈ ಬಗೆಗೆ ತನಿಖೆ ನಡೆದಿದೆಯೇ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು. ಇಂತಾ ಹೊಣೆಗೇಡಿ ಪೋಲೀಸರು ಹೇಗೆ ತನಿಖೆ ಮಾಡಿದ್ದಾರೆ ಎಂಬ ವಿವರ ನೀಡುವಂತೆಯೂ ಸುಪ್ರೀಂ ಕೇಳಿತು.