ಮಂಗಳೂರು (ಸೆಪ್ಟೆಂಬರ್ 25):- ವಿಶ್ವ ಪ್ರವಾಸೋದ್ಯಮ ದಿನಾಚರಣೆಸೆಪ್ಟೆಂಬರ್ 27 ರಂದು ಬೆಳಿಗ್ಗೆ 10 ಗಂಟೆಗೆತಣ್ಣೀರುಬಾವಿ ಕಡಲ ತೀರದಲ್ಲಿ ನಡೆಯಲಿದೆ.

   ಕಾರ್ಯಕ್ರಮ ಉದ್ಘಾಟನೆಯನ್ನು ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಸಚಿವ, ದ.ಕಜಿಲ್ಲಾಉಸ್ತುವಾರಿ ಸಚಿವಕೋಟ ಶ್ರೀನಿವಾಸ ಪೂಜಾರಿ ನೆರೆವೆರಿಸಲಿದ್ದು, ಅಧ್ಯಕ್ಷತೆಯನ್ನುಉತ್ತರ ವಿಧಾನ ಸಭಾ ಶಾಸಕ ಡಾ|| ಭರತ್ ಶೆಟ್ಟಿ ವಹಿಸಿದ್ದಾರೆ.ಪ್ರಸ್ತಾವಿಕ ನುಡಿಯನ್ನು ದ.ಕ.ಜಿಲ್ಲಾಧಿಕಾರಿಡಾ|| ರಾಜೇಂದ್ರ ಕೆ.ವಿಮಾಡಲಿದ್ದು, ಸ್ವಾಗತ ಭಾಷಣವನ್ನು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ್ ಮಾಡಲಿದ್ದಾರೆ.

   ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ನಡೆಯುವ ಕಾರ್ಯಕ್ರಮದ ವಿವರಇಂತಿವೆ:-ದ.ಕ ಜಿಲ್ಲಾ ಉಸ್ತುವಾರಿ ಸಚಿವರಿಂದ ಹೂಕುಂಡಗಳಿಗೆ ನೀರೆರೆಯುವ ಮುಖಾಂತರ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳನ್ನು ಸಂಪರ್ಕಿಸಲು ಅಳವಡಿಸಲಾಗುವ ನಾಮಫಲಕ/ಹೋರ್ಡಿಂಗ್ ಹಾಗೂ ಸುರಕ್ಷತಾ ನಾಮಫಲಕಗಳನ್ನು ಅನಾವರಣಗೊಳಿಸುವುದು, ಮುಖ್ಯ ಅತಿಥಿಗಳಿಂದ ಪರಿಸರ ಸಂರಕ್ಷಣೆಯ ಹಿತದೃಷ್ಠಿಯಿಂದ ಸಸ್ಯ ಸಂರಕ್ಷಣೆಗಾಗಿಅವರ ಹೆಸರಿನಲ್ಲಿ ಸಸ್ಯವನ್ನು ನೆಡಲಾಗುವುದು.  ಪಾರ್ಥ ವಾರಾಣಾಶಿ, ರಾಷ್ಟ್ರೀಯ ಜೀವರಕ್ಷಕ  ಸಂಸ್ಥೆ ಇವರಿಂದ ಸರ್ಫಿಂಗ್ ಮುಖಾಂತರ ಜೀವರಕ್ಷಣೆಯ ಪ್ರಾತ್ಯಕ್ಷಿಕೆ ಹಾಗೂ ಅರಿವುಮೂಡಿಸುವಿಕೆ ನಡೆಸಲಾಗುವುದು.ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದ ನಿರ್ದೇಶನದಂತೆಕಡಲ ತೀರಗಳನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ತಣ್ಣೀರುಬಾವಿ ಕಡಲ ತೀರದ ಸ್ವಚ್ಛತೆಯ ಅರಿವು ಮೂಡಿಸಲು ಸ್ವಚ್ಛತಾ ಪಕ್ವಾಡ್ -2020 ಕಾರ್ಯಕ್ರಮ ನಡೆಯಲಿದೆ.ಸ್ಥಳೀಯ ಯುವಕರು ಹಾಗೂ ಯುವಕ ಮಂಡಲಗಳಿಂದ ಕಡಲ ತೀರ ವಾಲಿಬಾಲ್‍ ಕ್ರೀಡೆ ನಡೆಯಲಿದೆ ಎಂದು ಮಂಗಳೂರು ಪ್ರವಾಸೋದ್ಯಮ ಇಲಾಖೆ ಪ್ರಕಟಣೆ ತಿಳಿಸಿದೆ.