ಮುಂಬಯಿ, ಆ. 07: ಮಾಟುಂಗಾ ಧಾರಾವಿ ಇಲ್ಲಿನ ಟ್ರಾನ್ಸಿಟ್ ಕ್ಯಾಂಪ್‌ನ ಕೊಠಡಿಯೊಂದರಲ್ಲಿ ವಾಸವಾಗಿದ್ದ ಎನ್ನಲಾದ ಸುಮಾರು ಆನಂದ್ ಮೋನಪ್ಪ ಪೂಜಾರಿ (51) ಅನಾರೋಗ್ಯದಿಂದ ಸಯಾನ್ ಆಸ್ಪತ್ರೆಯಲ್ಲಿ ದಾಖಲಾಗಿ ಕಳೆದ ಭಾನುವಾರ (ಆ. 03) ಅಸುನೀಗಿದ್ದರು.

ಈ ಬಗ್ಗೆ ಮುಂಬಯಿ ಮಾಟುಂಗಾ ಶಾಹು ನಗರ ಪೊಲೀಸ್ ಠಾಣೆಯ ಅಧಿಕಾರಿ ಪರಿಚಯಿಸ್ಥ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಉಪಾಧ್ಯಕ್ಷ ಡಾ| ಶಿವ ಮೂಡಿಗೆರೆ ಅವರನ್ನು ಸಂಪರ್ಕಿಸಿ ಮೃತರರ ಸಂಬಂಧಿಕರು, ಪರಿಚಯಿಸ್ಥರ ಗುರುತು ಕಂಡುಕೊಳ್ಳಲು ಮನವಿ ಮಾಡಿದ್ದು ಡಾ| ಶಿವ ಅವರು ವಿಷಯವನ್ನು ಪತ್ರಕರ್ತ ರೋನ್ಸ್ ಬಂಟ್ವಾಳ್ ಇವರಿಗೆ ರವಾನಿಸಿದ್ದು ಕ್ಷಣಾರ್ಧದಲ್ಲೇ ಅವಿಭಜಿತ ಕರಾವಳಿ ಜಿಲ್ಲೆಗಳು, ಕರ್ನಾಟಕ ರಾಜ್ಯ, ದೇಶ ವಿದೇಶದಾದ್ಯಂತದ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಪ್ರಕಟಿಸುವ ಜೊತೆಗೆ ಬಿಲ್ಲವ ಧುರೀಣರ ವಾಟ್ಸಾಪ್‌ಗಳಿಗೂ ಕಳುಹಿಸಿದ್ದರು.

ಪ್ರಕಟವಾದ ವರದಿಯನ್ನು ಗಮನಿಸಿದ ಸಂಬಂಧಿಕರಿಂದ ಮೃತರು ಕರ್ನಾಟಕ ಕರಾವಳಿಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಅಡ್ಯಾರ್ ಪದವು ಇಲ್ಲಿಯವರು ಎನ್ನಲಾಗಿದ್ದು, ನಿತ್ಯಾನಂದ ಡಿ.ಕೋಟ್ಯಾನ್ ಮೂಲಕ ಡಾ| ಶಿವ ಮೂಡಿಗೆರೆ ಅವರು ಅಶೋಕ್ ಕುಕ್ಯಾನ್ ಸಸಿಹಿತ್ಲು ಸಂಪರ್ಕಿಸಿದ್ದರು.  ಅಶೋಕ್ ಕುಕ್ಯಾನ್ ಮೃತರರ ಸಂಬಂಧಿಕರನ್ನು ಸಂಪರ್ಕಿಸಿ ಪೋಲಿಸರು ಮತ್ತು ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಬೇಕಾಗುವ ದಾಖಲೆಪತ್ರಗಳನ್ನು ಒದಗಿಸಿಕೊಟ್ಟು ಹೆಲ್ಪ್‌ಲೈನ್ ರಚಿಸಿ ಜಯ ಸುವರ್ಣ ಅಭಿಮಾನಿ ಬಳಗದ ಸಹಯೋಗದಲ್ಲಿ ಆಂಬುಲನ್ಸ್ ವ್ಯವಸ್ಥೆ ಮಾಡಿಸಿದ್ದು, ಸಂಬಂಧಿಕರಿಗೆ ಗಂಗಾಧರ್ ಜೆ. ಪೂಜಾರಿ ವಾಸ್ತವ್ಯ ವ್ಯವಸ್ಥೆ ಮಾಡಿದ್ದರು.

ಅಂತೆಯೇ ಕಳೆದ ಬುಧವಾರ ರಾತ್ರಿ ಮೃತರರ ಸಂಬಂಧಿಕರಾದ ಗಣೇಶ್ ಪೂಜಾರಿ, ಕಿಶೋರ್ ಪೂಜಾರಿ, ನಿತಿನ್ ಪೂಜಾರಿ ಅವರು ಶಾಹು ನಗರ ಠಾಣೆಗೆ ಆಗಮಿಸಿದ್ದು ಡಾ| ಶಿವ ಮೂಡಿಗೆರೆ ಸಹಯೋಗದಲ್ಲಿ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ಸಾಯಿ ಚಂದ್ರಭಾನ್ ಪಾಟೀಲ್ ಸಹಕಾರದಲ್ಲಿ ದಾಖಲೆಪತ್ರ, ಕಾರ್ಯವಿಧಾ ನಗಳನ್ನು ಪೂರೈಸಿ ಸಯಾನ್ ಆಸ್ಪತ್ರೆಯ ಪ್ರಕ್ರಿಯೆಗಳನ್ನು ನಡೆಸಿಕೊಟ್ಟಿದ್ದು ಸಂಬಂಧಿಕರು ಮೃತದೇಹವನ್ನು ಅಧಿಕೃತವಾಗಿ ಸ್ವಾಧೀನಕ್ಕೆ ಪಡೆದು ಮಧ್ಯಾಹ್ನ ಆಂಬುಲೆನ್ಸ್‌ನಲ್ಲಿ ಊರಿಗೆ ಸಾಗಿಸಿದರು.

ಭಾರತ್ ಬ್ಯಾಂಕ್‌ನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜಯ ಸಿ.ಸುವರ್ಣ, ಅಶೋಕ್ ಕುಕ್ಯಾನ್, ಡಾ| ಶಿವ ಮೂಡಿಗೆರೆ ಉಪಸ್ಥಿತರಿದ್ದು ಅಂತಿಮ ನಮನಗಳನ್ನು ಸಲ್ಲಿಸಿ ಶ್ರದ್ಧಾಂಜಲಿ ಕೋರಿದರು. ಬಳಿಕ ಆನಂದ್ ಪೂಜಾರಿ ಮೃತದೇಹ ಬೀಳ್ಕೊಟ್ಟು ಸಾಬೀತಾಗಿ ಊರಿಗೆ ತಲುಪುವಂತೆ ಕೋರುತ್ತಾ ವಿಧಿವತ್ತಾಗಿ ಅಂತ್ಯಕ್ರಿಯೆ ನೆರವೇರಿಸುವಂತೆ ಸಹಕರಿಸಿದರು.