ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಪಾಲಡ್ಕ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮೂಡುಬಿದಿರೆ ಹಾಗೂ ಸಂತ ಇಗ್ನೇಷಿಯಸ್ ಆಂಗ್ಲ ಮಾಧ್ಯಮ ಶಾಲೆ, ಪಾಲಡ್ಕ ಇದರ ಸಹಯೋಗದಲ್ಲಿ ಮೂಡುಬಿದಿರೆ ತಾಲೂಕು ಮಟ್ಟದ ಕರಾಟೆ ಪಂದ್ಯಾವಳಿ,  ಸಂತ ಇಗ್ನೇಷಿಯಸ್ ಆಂಗ್ಲ ಮಾಧ್ಯಮ ಶಾಲೆ ಪಾಲಡ್ಕದಲ್ಲಿ ನಡೆಯಿತು. 

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ವಂದನೀಯ ಎಲಿಯಾಸ್ ಡಿಸೋಜಾ ರವರು ವಹಿಸಿದ್ದು ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನವೀನ್ ಆರ್ ಪುತ್ರನ್, ದಕ್ಷಿಣ ಕನ್ನಡ ಕರಾಟೆ ಸಂಘದ ಅಧ್ಯಕ್ಷರಾದ ಈಶ್ವರ್ ಕಟೀಲ್, ಖಜಾಂಜಿ ವಿಕ್ಟರ್ , ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ಕಾಯ್ಕಿಣಿ ,  ಸಮೂಹ ಸಂಪನ್ಮೂಲ ವ್ಯಕ್ತಿ ಮಹೇಶ್ವರಿ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಆವಿಲ್ ಡಿಸೋಜಾ, ಚರ್ಚ್ ಆಯೋಗಗಳ ಸಂಯೋಜಕರಾದ ಡೆನಿಸ್ ಡಿಮೆಲ್ಲೊ, ಶಿಕ್ಷಕ - ರಕ್ಷಕ ಸಂಘದ ಉಪಾಧ್ಯಕ್ಷೆ ಮೆಲಿಟಾ ಬರ್ಬೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಜೆಸಿಂತಾ ಸಿಕ್ವೇರಾ  ಸ್ವಾಗತಿಸಿದರು.  ಪ್ರವೀಣ್ ಸಿಕ್ವೇರಾ ರವರು ಎಲ್ಲಾ ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಯಶಸ್ಸಿಗೆ ಹಣ ಹಾಗೂ ವಸ್ತು ರೂಪದಲ್ಲಿ ಸಹಾಯ ಮಾಡಿದ ದಾನಿಗಳನ್ನು ಗೌರವಿಸಲಾಯಿತು. ಶಿಕ್ಷಕ ರೋಶನ್ ಮಸ್ಕರೇನಸ್ ರವರು ನಿರೂಪಿಸಿದರು. ಶಿಕ್ಷಕಿ ಸವಿತಾ ರವರ ವಂದಿಸಿದರು .