ಮಂಗಳೂರು (ಸೆಪ್ಟೆಂಬರ್ 25):- ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದಲ್ಲಿ ಮೀನುಗಾರಿಕಾ ದೋಣಿಗಳ ಸಂಚಾರಕ್ಕೆಅಡಚಣೆಉಂಟು ಮಾಡುತ್ತಿರುವ 13 ಮರಳು ದಿಬ್ಬಗಳನ್ನು ತೆರವುಗೊಳಿಸುವ ಸಂಬಂಧಕರ್ನಾಟಕರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದಿಂದ ಸಿ.ಆರ್.ಝಡ್ ಕ್ಲಿಯರೆನ್ಸ್ ಬಂದಿರುತ್ತದೆ.

ಸದರಿ ಮರಳು ದಿಬ್ಬಗಳನ್ನು ತೆರವುಗೊಳಿಸುವ ಸಂಬಂಧಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯದಕಚೇರಿಅಧಿಕೃತಜ್ಞಾಪನ ಪತ್ರ,ಮಾರ್ಗಸೂಚಿಗಳನುಸಾರ ಸೆಪ್ಟೆಂಬರ್23ರಂದುನಡೆದಜಿಲ್ಲಾಸಮಿತಿ ಸಭೆತೀರ್ಮಾನದಂತೆ ಈಗಾಗಲೇ ಗುರುತಿಸಲಾಗಿರುವ ಅರ್ಹ ಸಾಂಪ್ರದಾಯಿಕ ಮರಳು ಪರವಾನಿಗೆದಾರರಿಂದ ಮರಳು ದಿಬ್ಬಗಳನ್ನು ತೆರವುಗೊಳಿಸಲು ಅನುಮತಿ ನೀಡುವ ಸಂಬಂಧ ಸೆಪ್ಟೆಂಬರ್28 ರಿಂದ ಅಕ್ಟೋಬರ್7 ರವರೆಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಉಪನಿರ್ದೇಶಕರ ಕಚೇರಿ, ಒಂದನೇ ಮಹಡಿ, ಜುಗಲ್‍ಟವರ್ಸ್, ಮಲ್ಲಿಕಟ್ಟೆ, ಮಂಗಳೂರು.ದೂ. ಸಂಖ್ಯೆ: 0824-2429932 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.