ಮಂಗಳೂರು:- ಸಂತ ಆಗ್ನೇಸ್  ಸಿ. ಬಿ. ಎಸ್.ಸಿ , ಶಾಲೆಯ 2019 -2020 ನೇ ಶೈಕ್ಷಣಿಕ ಸಾಲಿನ ಎಸ್ ಎಸ್. ಎಲ್.ಇ ಪರೀಕ್ಷಾ ಫಲಿತಾಂಶವು 15.7.2020ರಂದು ಪ್ರಕಟವಾಗಿದ್ದು 80 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು 24  ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿಯಲ್ಲಿ, 51 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ ಹಾಗೂ  5 ವಿದ್ಯಾರ್ಥಿನಿಯರು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ 100% ಫಲಿತಾಂಶ ಗಳಿಸಿದ್ದಾರೆ. ಶಿಫಾಲಿ  ಪ್ಲೋರಿನ್ ಲೋಬೊ ಪ್ರಥಮ,ಪ್ರತೀಕ್ಷ  ಎಸ್ ದ್ವಿತೀಯ ಹಾಗೂ ಮೈಥಿಲಿ ಶೆಟ್ಟಿ ತೃತೀಯ ಸ್ಥಾನವನ್ನು ಪಡೆದು ಉತ್ತಮ ಸಾಧನೆ ಮಾಡಿ ಶಾಲೆಗೆ  ಕೀರ್ತಿಯನ್ನು ತಂದಿದ್ದಾರೆ. ಇವರಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯಿನಿ ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿರುತ್ತಾರೆ.