ಪುತ್ತೂರು: ದೇಶಕ್ಕೆ ಸ್ವಾತಂತ್ರ್ಯ ಬಂದು75 ವರ್ಷಗಳು ಪೂರ್ತಿಗೊಂಡ ಹಿನ್ನೆಲೆಯಲ್ಲಿಕೇಂದ್ರಆಯುಷ್ ಸಚಿವಾಲಯವು ಮಕರ ಸಂಕ್ರಾತಿಯ ಮುನ್ನಾ ದಿನ ಸೂರ್ಯ ನಮಸ್ಕಾರವನ್ನು ದೇಶದಾದ್ಯಂತ ಆಯೋಜಿಸಿತ್ತು. ಇದರ ಭಾಗವಾಗಿ ಸಂತ ಫಿಲೋಮಿನಾ ಕಾಲೇಜಿನ 3/19 ಕರ್ನಾಟಕ ಬೆಟಾಲಿಯನ್ ಎನ್‍ಸಿಸಿ ಘಟಕವು ‘ಸೂರ್ಯ ನಮಸ್ಕಾರ’ ವಿಶೇಷ ಕಾರ್ಯಕ್ರಮವನ್ನುಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಏರ್ಪಡಿಸಿತು.
ಕೆಡೆಟ್ ವರ್ಷಕೆಟಿ ಇವರ ನೇತೃತ್ವದಲ್ಲಿ 110ಮಂದಿ ಎನ್‍ಸಿಸಿ ಕೆಡೆಟ್‍ಗಳು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿ ಸೂರ್ಯನಮಸ್ಕಾರದ ವಿವಿಧ ಹಂತದ ಯೋಗಾಸನವನ್ನು ಉತ್ಸಾಹದಿಂದ ಮಾಡಿದರು. ಕಾಲೇಜಿನ ಎನ್‍ಸಿಸಿ ಘಟಕದ ಅಧಿಕಾರಿ ಲೆ|ಜೋನ್ಸನ್ ಡೆವಿಡ್ ಸಿಕ್ವೆರಾ ಅವರು ಕಾರ್ಯಕ್ರಮವನ್ನು ಸಂಘಟಿಸಿದರು. ಹವಲ್ದಾರ್‍ದೇವ್ ಬಾಹದೂರ್ ಅಲೆ ಸಹಕರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ರೆ|ಡಾ| ಆ್ಯಂಟನಿ ಪ್ರಕಾಶ್ ಮೊಂತೆರೋ ಉಪಸ್ಥಿತರಿದ್ದರು.