ಗಣರಾಜ್ಯೋತ್ಸವ ಪರೇಡಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ತಿರಸ್ಕರಿಸಿದ ಕೇಂದ್ರದ ನಡೆಯನ್ನು ಖಂಡಿಸಿ ದ.ಕ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿವತಿಯವರು    ನಮ್ಮ ನಡಿಗೆ ಬ್ರಹ್ಮಶ್ರೀ ನಾರಾಯಣಗುರು ಕಡೆಗೆ ಎಂಬ 

ಕಾಲ್ನಡಿಗೆ ಜಾಥಾವನ್ನು ಲುಕ್ಮಾನ್ ಬಂಟ್ವಾಳ ನಾಯಕತ್ವದಲ್ಲಿ ಹಮ್ಮಿಕೊಂಡರು.

ಮಂಗಳೂರಿನ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಿಂದ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದವರೆಗೆ ಘೋಷಣೆಯೊಂದಿಗೆ ಆರಂಭವಾಯಿತು.

ಜನವಿರೋಧಿ ಬಿಜೆಪಿ ಸರಕಾರವು ಜನಪರ ಕೆಲಸಗಳಿಗೆಲ್ಲ ಅಡ್ಡಗಾಲು ಹಾಕುತ್ತಿದೆ. ಜನಸಾಮಾನ್ಯರಿಗೆ ಉಪಯುಕ್ತ ಕೆಲಸ ಮಾಡಲು ಅಡ್ಡಗಾಲು ಹಾಕುವುದು ಬಿಟ್ಟರೆ ಅವರು ಇನ್ನೇನೂ ಮಾಡುವುದಿಲ್ಲ ಎಂದು ಮಾಜೀ ಮಂತ್ರಿ ಯು. ಟಿ. ಖಾದರ್ ಹೇಳಿದರು. ಕೇರಳ ಸರಕಾರವು ಈಗಾಗಲೆ ಈ ಬಗೆಗೆ ಗಟ್ಟಿ ಧ್ವನಿ ಎತ್ತಿ ಪ್ರತಿಭಟನೆ ಮಾಡಿದೆ.

ಐವಾನ್ ಡಿಸೋಜಾ ಅವರು ಮಾತನಾಡಿ ನಾರಾಯಣ ಗುರುಗಳಿಗೆ ಅವಮಾನ ಮಾಡಿದವರಿಗೆ ಧಿಕ್ಕಾರ ಕೂಗಿದರು. ಪಿವಿ ಮೋಹನ್ ಮೊದಲಾದವರು ಉಪಸ್ಥಿತರಿದ್ದರು.

ಜಾಥಾವು ಮಲ್ಲಿಕಟ್ಟೆ, ಬಂಟ್ಸ್ ಹಾಸ್ಟೆಲ್, ಪಿವಿಎಸ್, ಚಿತ್ರಾ, ಅಳಕೆ ಹಾದಿಯಾಗಿ ಕುದ್ರೋಳಿ ಗೋಕರ್ಣ ನಾಥೇಶ್ವರ ಆಲಯ ತಲುಪಿತು.

ನಾರಾಯಣ ಗುರುಗಳ ದಾರಿ ಮರೆತು ಬಿಜೆಪಿ ಹಿಂದುತ್ವ ಅಜೆಂಡಾ ಕಾರಣಕ್ಕೆ ಅವರ ಸ್ತಬ್ಧ ಚಿತ್ರ ನಿರಾಕರಿಸಿದೆ. ಬಿಜೆಪಿಗೆ ಯಾವುದೇ ಜನಪರ ನೀತಿ ಇಲ್ಲ. ಅದು‌ ಸಂವಿಧಾನ ಉಲ್ಲಂಘಿಸಿ ಅಲ್ಪಸಂಖ್ಯಾತರ ಮಾತ್ರವಲ್ಲ ಎಲ್ಲ ಯುವ ಜನರ ಹಾದಿ ತಪ್ಪಿಸುತ್ತಿದೆ. ಇದು ಖಂಡನಾರ್ಹ ಎಂದು ಐವಾನ್ ಡಿಸೋಜಾ, ಪಿ. ವಿ. ಮೋಹನ್, ಶಶಿಧರ ಹೆಗ್ಡೆ ಮೊದಲಾದವರು ಮಾತನಾಡಿದರು.

ಈ ಹೋರಾಟವನ್ನು ಮುಂದುವರಿಸುವುದಾಗಿ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಹೇಳಿದರು. ಇದು ಅಸಮಾನತೆಯ ವಿರುದ್ದ ಹೋರಾಡಿದ ಗೋಕರ್ಣನಾಥೇಶ್ವರ ಆಲಯ. ಇಲ್ಲಿ ನಾವು ಯಾಚ ಕಾರಕ್ಕಾಗಿಯೂ ಈ ಹೋರಾಟದಿಂದ ಹಿಂದುಳಿಯುವುದಿಲ್ಲ ಎಂದೂ ಅವರು ಹೇಳಿದರು.

ನಾರಾಯಣ ಗುರುಗಳ ಬದಲು‌ ಶಂಕರಾಚಾರ್ಯರ ಪೋಟೋ ಕೇಳಿದವರು ನಾಳೆ ಗೋಡ್ಸೆ ಮೆರವಣಿಗೆಯನ್ನೂ ಮಾಡಬಹುದು ಎಂದು ಒಟ್ಟಾಗಿ ಹೇಳಿದರು.