ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆ: ಮೂಡುಬಿದಿರೆಯ ಗ್ರಾಮ ದೇವತೆ ಹತ್ತನೇ ಶತಮಾನದ ಗೌರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಪೂಜೆಯ ಸಂದರ್ಭ ದಲ್ಲಿ ಸೆಪ್ಟೆಂಬರ್ 29 ರಂದು ಚಂಡಿಕಾ ಮಹಾಯಾಗ ದೇವಾಲಯದಲ್ಲಿ ಸಂಪನ್ನಗೊಂಡಿತು. ಸಾವಿರಾರು ಭಕ್ತಾದಿಗಳ ಸಮಕ್ಷಮ ಚಂಡಿಕಾ ಮಹಾಯಾಗದ ಪೂರ್ಣಾಹುತಿಯನ್ನು ಅನುವಂಶಿಕ ಆಡಳಿತ ಮುಕ್ತೇಸರ ರಾಜೇಶ್ ಭಟ್ ಕಾರ್ಯಕ್ರಮವನ್ನು ನಡೆಸಿದರು.
ಅದಕ್ಕೆ ಮೊದಲು ಶಾರದಾ ಪೂಜೆ, ಮಕ್ಕಳ ಪೂಜೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ಭಕ್ತರು ಪಾಲ್ಗೊಂಡರು.
ಅಕ್ಟೋಬರ್ ಒಂದರಂದು ಮಹಾನವಮಿ, ಆಯುಧ ಪೂಜೆ ನಡೆಯಲಿದ್ದು, ಎರಡರಂದು ವಿಜಯದಶಮಿ, ಮೂರರಂದು ಅಹೋರಾತ್ರಿ ಏಕ ಭಜನೆ ನಡೆಯಲಿದೆ.
ಅಕ್ಟೋಬರ್ ಐದರಂದು ವಿಶೇಷವಾಗಿ ದೇವಾಲಯದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಬಗ್ಗೆ ತಾಂಬೂಲ ಪ್ರಶ್ನೆ ಕಾರ್ಯಕ್ರಮ ದೂಪದಕಟ್ಟೆ ಜ್ಯೋತಿಷಿ ಗುರುಮೂರ್ತಿ ಹಾಗೂ ನಾರಾಯಣ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.