ಮುಲ್ಕಿ: ಅತಿಕಾರಿ ಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈಲೊಟ್ಟು ಬಳಿಯ ಭಾಸ್ಕರ್ ಬಂಗೇರ ಎಂಬುವರ ಮನೆಗೆ ಆಕಸ್ಮಿಕ ಬೆಂಕಿ ತಗಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಆಕಸ್ಮಿಕ ಬೆಂಕಿಯಿಂದ ಮನೆಯ ಮಾಡು ಧಗಧಗನೇ ಉರಿಯಲಾರಂಭಿಸಿದ್ದು ಕೂಡಲೇ ಸ್ಥಳೀಯರು ಬೆಂಕಿ ನಂದಿಸಲು ಶ್ರಮ ವಹಿಸಿದ್ದಾರೆ ಬಳಿಕ ಅಗ್ನಿಶಾಮಕದಳ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಆಕಸ್ಮಿಕ ಬೆಂಕಿ ತೀವ್ರ ಬಡತನದಲ್ಲಿರುವ ಕುಟುಂಬಸ್ಥರು ಕಂಗಲಾಗಿದ್ದಾರೆ. ಸ್ಥಳಕ್ಕೆ ಅತಿಕಾರಿಬೆಟ್ಟು ಗ್ರಾಮ ಪಂಚಾಯತಿ ಅಧ್ಯಕ್ಷ ಮನೋಹರ ಕೋಟಿಯನ್, ಮಾಜಿ ಅಧ್ಯಕ್ಷೆ ಶಾರದಾ ವಸಂತ್ ಭೇಟಿ ನೀಡಿ ಪರಿಹಾರದ ಬಗ್ಗೆ ಸೂಕ್ತ ಕ್ರಮ ಕೈಗೊಂಡಿದ್ದಾರೆ.