ಮಂಗಳೂರು ಮಹಾನಗರದ ಬೋಳೂರಿನ ಸುಲ್ತಾನ್ ಬತ್ತೇರಿಯಲ್ಲಿ ನೂತನವಾಗಿ ಸ್ಥಾಪಿಸಲಾದ ರಿಕ್ಷಾ ನಿಲ್ದಾಣವನ್ನು ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರು ಉದ್ಘಾಟಿಸಿದರು. ವಿಧಾನ ಪರಿಷತ್ ಶಾಸಕರ ನಿಧಿಯಿಂದ ಸ್ಥಾಪಿಸಲಾದ ಈ ಅಟೋ ರಿಕ್ಷಾ ನಿಲ್ದಾಣವು ಸಮಾಜದ ಎಲ್ಲಾ ಜನರ ಉಪಯೋಗಕ್ಕೆ ಬರಲಿ ಎಂದು ಈ ಸಂದರ್ಭದಲ್ಲಿ ಶುಭ ಹಾರೈಸಿದರು. ರಿಕ್ಷಾ ಚಾಲಕರು ಸಮಾಜದ ರಾಯಭಾರಿಗಳು ಎಲ್ಲಾ ರಂಗದಲ್ಲಿಯೂ ರಿಕ್ಷಾ ಚಾಲಕರು ತಮ್ಮದೇ ಅದ ಸೇವೆಯನ್ನು ಸಲ್ಲಿಸಿರುತ್ತಾರೆ. ರಿಕ್ಷಾಚಾಲಕರಿಗೆ ನೀಡಬೇಕಾದಂತಹ ಗೌರವ ಘನತೆಯನ್ನು ನಾವು ನೀಡುವುದು ಅಗತ್ಯವಿದೆ. ರಿಕ್ಷಾಚಾಲಕರು ಪ್ರಮಾಣಿಕತೆಯಿಂದ ಕೆಲಸ ನಿರ್ವಹಿಸಿದಾಗ ಸಮಾಜಕ್ಕೆ ಅವರು ದೊಡ್ಡ ಕೊಡುಗೆಯನ್ನು ನೀಡಿದಂತಾಗುತ್ತದೆ. 

ರಿಕ್ಷಾ ಚಾಲಕರ ಪ್ರತಿ ಸಮಸ್ಯೆಗಳಿಗೆ ಸ್ಪಂದಿಸುವಂತಹ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಿದೆ ಎಂದು ಐವನ್ ಡಿʼಸೋಜಾ ನುಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್. ಪದ್ಮರಾಜ್ ಪೂಜಾರಿ ಮಾತನಾಡಿ, ರಿಕ್ಷಾ ಚಾಲಕರಿಗೆ ಮೂಲಭೂತ ಸೌಕರ್ಯ ಒದಗಿಸಿಕೊಡುವಲ್ಲಿ ಶ್ರೀ ಐವನ್ ಡಿʼಸೋಜಾರವರ ಈ ಕಾರ್ಯಕ್ರಮ ಶ್ಲಾಘನಾರ್ಹ ಅವರು ಜಿಲ್ಲೆಯ ಅನೇಕ ಭಾಗಗಳಲ್ಲಿ ಪ್ರತ್ಯೇಕವಾಗಿ ಮಂಗಳೂರು  ನಗರದಲ್ಲಿ ಪ್ರತ್ಯೇಕವಾಗಿ ರಿಕ್ಷಾಚಾಲಕರ ಅನೇಕ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ ಅದು ಅಭಿಮಾನದ ಸಂಗತಿ ಎಂದು ತಿಳಿಸಿದರು.

 ಇದೇ ಸಂದರ್ಭದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆಯವರು ಮಾತನಾಡಿ ರಿಕ್ಷಾಚಾಲಕರ ಬೇಡಿಕೆಗಳಿಗೆ ಕಳೆದ ಅನೇಕ ವರ್ಷಗಳಿಂದ ಸ್ಪಂದಿಸುತ್ತಿರುವ ಐವನ್ ಡಿʼಸೋಜಾರವರು ಜನಪರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುತ್ತಾರೆ. ಎರಡು ಭಾರಿ ವಿಧಾನಪರಿಷತ್ ಶಾಸಕರಾಗಿ ಜನರ ಸಮಸ್ಯೆಗಳಿಗೆ ಸ್ಫಂದಿಸಿದಂತಹ ಕೆಲಸ- ಕಾರ್ಯಗಳು  ನಿಜಕ್ಕೂ ಶ್ಲಾಘನಾರ್ಹ ಎಂದು ನುಡಿದರು. 

ಈ ಸಂದರ್ಭದಲ್ಲಿ ಕೆಪಿಸಿಸಿ ನಾಯಕರು ಪದ್ಮರಾಜ್ ಪೂಜಾರಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಮನಪಾ ಸದಸ್ಯರು ಕಮಲಾಕ್ಷ ಸಾಲಿಯಾನ್, ಸತೀಶ್ ಪೆಂಗಲ್, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪ್ರಕಾಶ್ ಸಾಲಿಯಾನ್, ಸುಲ್ತಾನ್ ಬತ್ತೆರಿ ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರು ಪ್ರಾಣೇಶ್ ಸಾಲಿಯಾನ್, ಪ್ರವೀಣ್, ಯತೀಶ್ ಬೋಳೂರ್, ಸ್ಟೀವನ್, ಅನಿಲ್ ಬೆಂಗರೆ, ಭುವನ್, ಅಲೀಂ ಕುದ್ರೋಳಿ, ಇಮ್ರಾನ್ ಏ.ಆರ್, ಸಿರಾಜ್ ಬಜ್ಪೆ, ಯೋಗೀಶ್ ನಾಯ್ಕ್ ಉಪಸ್ಥಿತರಿದ್ದರು.