ಕರ್ನಾಟಕದ ಬಿಜೆಪಿ ಸರಕಾರವು ಮುಸ್ಲಿಮರ 4% ಮೀಸಲಾತಿ ತೆಗೆದು ಒಕ್ಕಲಿಗರು ಮತ್ತು ಲಿಂಗಾಯತರಿಗೆ ತಲಾ 2% ಹಂಚಿರುವುದು ದೋಷಪೂರಿತ ಎಂದು ಸುಪ್ರೀಂ ಕೋರ್ಟ್ ಹೇಳಿತು.
ನ್ಯಾಯಮೂರ್ತಿಗಳಾದ ಕೆ. ಎಂ. ಜೋಸೆಫ್ ಮತ್ತು ಬಿ. ವಿ. ನಾಗರತ್ನ ಅವರಿದ್ದ ಸುಕೋ ಪೀಠವು ಇದು ಕ್ರಮಬದ್ದವಾಗಿಲ್ಲ ಎಂದರು. ಸಮಯಾವಕಾಶ ಕೋರಿದ್ದರಿಂದ ಏಪ್ರಿಲ್ 18ಕ್ಕೆ ವಿಚಾರಣೆ ಮುಂದೂಡಿದರು. ಬಸವರಾಜ ಬೊಮ್ಮಾಯಿ ಸರಕಾರವು ಚುನಾವಣೆ ದೃಷ್ಟಿಯಿಂದ ಇದನ್ನು ಮಾಡಿದೆ. ಯಾವುದೇ ಅಧ್ಯಯನ ಇಲ್ಲದೆ ತೆಗೆದುಕೊಂಡ ನಿರ್ಧಾರ ಎಂದು ಮುಸ್ಲಿಂ ಪರ ವಕೀಲರುಗಳಾದ ಕಪಿಲ್ ಸಿಬಲ್, ದುಷ್ಯಂತ್ ದವೆ, ಗೋಪಾಲ ಶಂಕರನಾರಾಯಣನ್ ವಾದಿಸಿದರು.
ಲಿಂಗಾಯತ ಮತ್ತು ಒಕ್ಕಲಿಗರ ವಕೀಲರಾದ ಮುಕುಲ್ ರೋಹಟಗಿ ಯಾವುದೇ ಮಧ್ಯಂತರ ಆದೇಶ ನೀಡದಂತೆ ಮನವಿ ಮಾಡಿದರು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾರು ಇದಕ್ಕೆ ಇನ್ನಷ್ಟು ಕಾಲಾವಕಾಶ ಬೇಕು ಎಂದರು. ಏಪ್ರಿಲ್ 18ರಂದು ಮಾಹಿತಿ ಸಹಿತ ವಿವರ ನೀಡುವಂತೆ ಸುಕೋ ಪೀಠವು ರೋಹಟಗಿ ಮತ್ತು ಮೆಹ್ತಾರಿಗೆ ಸೂಚಿಸಿದರು