ಮಂಗಳೂರು: ಕರಾವಳಿ ಚಿತ್ರಕಲಾ ಚಾವಡಿ (ರಿ.) ಮಂಗಳೂರು ಆಯೋಜಿಸುವ ‘ವಿಶ್ವ ಕಲಾ ದಿನ’ ಇದರ ಅಂಗವಾಗಿ ಕಲಾವಿದರಿಂದ ಆಶು ಚಿತ್ರಕಲಾ ರಚನಾ ಶಿಬಿರವು ಮಂಗಳೂರಿನ ಸುಲ್ತಾನ್ ಬತ್ತೇರಿ ರಸ್ತೆ, ಬೊಕ್ಕಪಟ್ನದ ಅಯ್ಯಪ್ಪ ದೇವಾಲಯದ ಬಳಿ, ದಿನಾಂಕ 15 ಎಪ್ರಿಲ್ 2023ರ ಶನಿವಾರದಂದು ಬೆಳಿಗ್ಗೆ ಗಂಟೆ 8.30ರಿಂದ – ಸಂಜೆ 4.00 ರವರೆಗೆ ನಡೆಯಲಿದೆ. ಈ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯ ಮಂಗಳ ಗಂಗೋತ್ರಿ ಪ್ರಾಧ್ಯಾಪಕರು ಹಾಗೂ ನಿಕಟಪೂರ್ವ ಪರೀಕ್ಷಾಂಗ ಕುಲಸಚಿವರಾದ ಡಾ. ಪಿ.ಎಲ್. ಧರ್ಮ ಉದ್ಘಾಟಿಸಲಿದ್ದು,  ದಿವಾಕರ ಕದ್ರಿ, ಮಾಜಿ ಮೇಯರ್, ಜನರಲ್ ಮ್ಯಾನೇಜರ್ ಕಾರ್ಡೋಲೈಟ್ ಸ್ಪೆಷಾಲಿಟಿ ಕೆಮಿಕಲ್ ಇಂಡಿಯ ಎಲ್‌.ಎಲ್‌ ಪಿ, ಮಂಗಳೂರು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಗಣೇಶ್ ಸೋಮಯಾಜಿಯವರು ಜಲವರ್ಣ ಪ್ರಾತ್ಯಕ್ಷಿಕೆ ನೀಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮನೋರಂಜನಿ ಉಪಾಧ್ಯ, ಜಾನ್ ಚಂದ್ರನ್, ಈರಣ್ಣ ತಿಪ್ಪಣ್ಣನವ‌ರ್, ಜಯಶ್ರೀ ಶರ್ಮ, ಡಾ. ಜಯಪ್ರಕಾಶ್, ಅರುಣ್ ಕಾರಂತ್, ನವೀನ್ ಬಂಗೇರ, ಡಾ. ಸಂಜೋತ ಧರ್ಮ, ಜೀವನ್‌ ಕುಮಾರ್ ಕದ್ರಿ, ಸಂದೀಪ್ ಆಳ್ವ, ಡಾ. ಎಸ್.ಎಮ್. ಶಿವಪ್ರಕಾಶ್, ಗಣೇಶ ಸೋಮಯಾಜಿ ಮುಂತಾದ ಕಲಾವಿದರು ಭಾಗವಹಿಸಲಿದ್ದಾರೆ.