ಮಂಗಳೂರು: ಬಾಹ್ರೇಯ್ನ್ ಕಸ್ತೂರಿ ಕನ್ನಡ ಎಫ್‍ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ಮಂಗಳೂರುನಲ್ಲಿನ ಹೊಟೇಲ್ ಓಷನ್ ಪರ್ಲ್‍ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬಾಹ್ರೇಯ್ನ್‍ನ ಉದ್ಯಮಿ, ಮೆಟಲ್ ಕಂಪೆನಿ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ದ.ಕ ಜಿಲ್ಲಾ ಮುಸ್ಲಿಂ ವೆಲ್ಫೇರ್ ಅಸೋಸಿ ಯೇಶನ್‍ನ ಅಧ್ಯಕ್ಷ ಅಬ್ದುಲ್ ರಜಾಕ್ ಕೋಟೆ ಹೆಜಮಾಡಿ, ಬಾಹ್ರೇಯ್ನ್ ಕನ್ನಡ ಸಂಘದ ಪೂರ್ವಾಧ್ಯಕ್ಷ   ಆಸ್ಟಿನ್ ಸಂತೋಷ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ ಹರೀಶ್ ರೈ, ಪೊಲೀಸ್ ಇಲಾಖೆಯ ವಿಶೇಷ ಘಟಕದ ಎಎಸ್‍ಐ ಗೋಪಾಲಕೃಷ್ಣ ಕುಂದರ್ ಮತ್ತು ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಪರಿಷತ್  ಅಧ್ಯಕ್ಷ ಇಂ| ಕೆ.ಪಿ ಮಂಜುನಾಥ್ ಸಾಗರ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಮಲಾಕ್ಷ ಅವರನ್ನು ಗೌರವಿಸಿ ಅಭಿನಂದಿಸಿದರು.