ಮಂಗಳೂರು:- ಮಂಗಳೂರು ಧರ್ಮ ಪ್ರಾಂತ್ಯದ ಅಧಿಕೃತ ಪುಣ್ಯ ಕ್ಷೇತ್ರ ಮುಡಿಪು ಸಂತ ಜುಜೆ ವಾಜ್ ಇಲ್ಲಿ ವಾರ್ಷಿಕ ಮಹೋತ್ಸವವು ಡಿಸೆಂಬರ್ 3ರಂದು ಸಂಜೆ 5 ಗಂಟೆಗೆ ಮಂಗಳೂರು ಕೊರ್ಡೆಲ್ ದೇವಾಲಯದ ಸಹಾಯಕ ಧರ್ಮಗುರುಗಳಾದ ಫಾ| ಶಾನ್ ರೊಡ್ರಿಗಸ್ ಪ್ರಾಧಾನ ಗುರುಗಳಾಗಿ ಬಲಿಪೂಜೆ ನೇರವೇರಿಸಿದರು.

ಮಂಗಳೂರು ಧರ್ಮ ಪ್ರಾಂತ್ರದ ಮಹಾಗುರು ಫಾ| ಮ್ಯಾಕ್ಸಿಮ್ ನೊರೊನ್ಹಾ, ಮಂಗಳೂರು ದಕ್ಷಿಣ ವಲಯ ಹಾಗೂ ಪೆರ್ಮಾನೂರು ದೇವಾಲಯದ ಫಾ| ಸಿಪ್ರಿಯನ್ ಪಿಂಟೊ, ಐ.ಸಿ.ವೈ.ಎಮ್ ನಿರ್ದೇಶಕರಾದ ಫಾ| ಆಶ್ವಿನ್ ಕಾರ್ಡೊಜಾ, ಮುಡಿಪು ಪುಣ್ಯಕ್ಷೇತ್ರದ ನಿರ್ದೇಶಕರಾದ ಫಾ| ಬೆಂಜಮಿನ್ ಪಿಂಟೊ, ಸಹಾಯಕ ಧರ್ಮಗುರುಗಳಾದ ಫಾ| ಸುನಿಲ್ ಮತ್ತಿತರ ಧರ್ಮಗುರುಗಳು ಹಾಜರಿದ್ದರು. ಈ ದಿನವನ್ನು ವ್ಯಾದಿಷ್ಟರಿಗಾಗಿ ವಿಶೇಷ ಪ್ರಾರ್ಥನೆ ಮತ್ತು ಆರ್ಶಿವಾದ ನಡೆಯಿತು.