ಉಡುಪಿ,(ಡಿಸೆಂಬರ್ 4): ಅಖಿಲ ಭಾರತ ಸೈನಿಕ ಶಾಲಾ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಡಿಸೆಂಬರ್ 18 ರ ವರೆಗೆ ವಿಸ್ತರಿಸಲಾಗಿದೆ. ಎಐಎಸ್‌ಎಸ್‌ಇಇ-2021 ಪ್ರವೇಶ ಪರೀಕ್ಷೆಯು ಫೆಬ್ರವರಿ 7, 2021 ರಂದು ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 0120-6895200 ಅಥವಾ aissee@nta.ac.in ಸಂಪರ್ಕಿಸುವoತೆ  ಕೊಡಗು ಸೈನಿಕ ಶಾಲೆಯ ಪ್ರಕಟಣೆ ತಿಳಿಸಿದೆ.