ಮೂಡುಬಿದಿರೆ: ಸ್ಥಳೀಯ ಪ್ರಾಂತ್ಯ ಸರಕಾರಿ ಪ್ರೌಢಶಾಲೆಯಲ್ಲಿ ಜೂನ್ 15ರಂದು ವಿದ್ಯಾರ್ಥಿಗಳಿಗೆ ಪರಿಸರ ಸ್ವಚ್ಛತೆ, ಗ್ರಾಹಕ ಸಂಬಂಧಿಸಿದ ಮಾಹಿತಿಯನ್ನು ನೀಡಲಾಯಿತು. ರಾಜ್ಯ ಸಂಪನ್ಮೂಲ ವ್ಯಕ್ತಿ, ಕಾರ್ಯನಿರತ ವರದಿಗಾರ, ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಜೊತೆ ಕಾರ್ಯದರ್ಶಿ, ರಾಯಿ ರಾಜಕುಮಾರ ಅವರು ಸಂಬಂಧಿತ ಮಾಹಿತಿದಾರರಾಗಿ ಆಗಮಿಸಿದ್ದರು.
ಅವರು ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ಉಪಯೋಗಕರವಾದ : ಸ್ವತಹ ಸ್ವಚ್ಛತೆಯಲ್ಲಿ ಪರಿಸರದ ಮಹತ್ವ, ಗ್ಯಾಸ್ ಬಳಕೆಯಲ್ಲಿ ವಹಿಸಬೇಕಾದ ಎಚ್ಚರಿಕೆ, ಶಾಲಾ ಬಿಸಿ ಊಟದ ಮೇಲು ಉಸ್ತುವಾರಿ, ಶಾಲೆ ಹಾಗೂ ಮನೆಯ ಪರಿಸರವನ್ನು ಹೇಗೆ ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳಬಹುದು ಎಂಬ ಹಲವಾರು ಪರಿಸರ ಸಂಬಂಧಿ ಗ್ರಾಹಕ ಮಾಹಿತಿಯನ್ನು ಎಲ್ಲ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಹಿರಿಯ ಶಿಕ್ಷಕಿ ರೂಪ ಎಸ್ ಕಿಣಿಯವರು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರುಗಳಾದ ನವೀನ್ ಚಂದ್ರ ಅಂಬೂರಿಯವರು ಸ್ವಾಗತಿಸಿದರು. ಬಾಲಕೃಷ್ಣ ರೇಖ್ಯ ಕಾರ್ಯಕ್ರಮ ನಿರೂಪಿಸಿದರು. ರತ್ನಾವತಿ ಆಚಾರ್ಯರು ಕಾರ್ಯಕ್ರಮ ಸಂಯೋಜಿಸಿದ್ದರು.