ಕಾರ್ಕಳ: ವಿಶ್ವ ಶಾಲಾ ಮಕ್ಕಳ ವಾಲಿಬಾಲ್ ಚಾಂಪಿಯನ್ ಶಿಪ್ 15 ರ ಭಾರತ ತಂಡದಲ್ಲಿ ಸ್ಥಾನ ಪಡೆದ ಕರ್ನಾಟಕದ ಏಕೈಕ ಆಟಗಾರ್ತಿ ಶಗುನ್ ಎಸ್ ವರ್ಮ ಹೆಗ್ಡೆಯವರನ್ನು ಕಾರ್ಕಳ ಜೈನ ಮಠದ ಪರವಾಗಿ ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮ ಭಾನುವಾರ ಕಾರ್ಕಳ ಜೈನ ಮಠದ ಆಡಳಿತ ಸಮಿತಿಯ ವತಿಯಿಂದ ನಡೆಯಿತು.
ಜೈನ ಸಮಾಜದ ಹಿರಿಯ ಬಂಧು ಹಾಗೂ ರಾಜ್ಯ ಸಹಕಾರಿ ಮಾರುಕಟ್ಟೆ ಸಮಿತಿ ಮತ್ತು ಎಸ್. ಸಿ. ಡಿ. ಸಿ. ಸಿ. ಬ್ಯಾಂಕಿನ ಅಧ್ಯಕ್ಷರಾಗಿರುವ ಕಾರ್ಕಳದ ಡಾ। ಎಂ. ಎನ್. ರಾಜೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಕಾರ್ಕಳ ಜೈನ ಮಠದ ರಾಜಗುರು ಧ್ಯಾನಯೋಗಿ ಲಲಿತಕೀರ್ತಿ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶೀರ್ವಚಿಸಿದ ಸ್ವಾಮೀಜಿಯವರು, ಯುವ ಪ್ರತಿಭೆಗಳನ್ನು ಪ್ರೋತ್ಸಾಹ ಮಾಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳಿಂದ ಅವರನ್ನು ಮತ್ತಷ್ಟು ಉತ್ತೇಜಿಸಲು ಸಹಕಾರಿಯಾಗುತ್ತದೆ ಎಂದರು.
ಹಿರಿಯರಾದ ಅನಂತರಾಜ್ ಪೂವನಿ, ಮೋಹನ್ ಪಡಿವಾಳ್, ಅಂಡಾರ್ ಮಹಾವೀರ ಹೆಗ್ಡೆ, ಮಹಾವೀರ ಹೆಗ್ಡೆ, ಎನ್. ಪ್ರಭಾತ್, ಧನಕೀರ್ತಿ ಕಡಂಬ, ಹಿರಿಯ ನ್ಯಾಯವಾದಿ ಸನತ್ ಕುಮಾರ್ ಜೈನ್, ಅಶೋಕ್ ಎಚ್ ಎಮ್, ವಿನಯ ಅರಿಗ ಮತ್ತಿತರರು ಉಪಸ್ಥಿತರಿದ್ದರು. ವರ್ಧಮಾನ್ ಶಾಲೆಯ ಸಂಚಾಲಕಿ ಶಶಿಕಲಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.