ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ಡಿ. 29, ಸೋಮವಾರ ರಂದು "ಪೇಜಾವರ ವಿಶ್ವೇಶತೀರ್ಥ ನಮನ -2025 " ಕಾರ್ಯಕ್ರಮ ಜರಗಲಿದೆ.

ಪೇಜಾವರ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ತೀರ್ಥರ ಮಾರ್ಗದರ್ಶನದೊಂದಿಗೆ ಜರಗಲಿರುವ ಈ ಸಮಾರಂಭದಲ್ಲಿ ಫಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಮೂಡುಬಿದಿರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ದಿವ್ಯ ಸಾನ್ನಿಧ್ಯ ವಹಿಸಲಿರುವರು.
ಪೂರ್ಣಿಮಾ ರಾವ್ ಪೇಜಾವರ ನೇತೃತ್ವದಲ್ಲಿ ವಿವಿಧ ತಂಡಗಳಿಂದ "ಕೃಷ್ಣ ಗೀತ ಗಾಯನ" ದೊಂದಿಗೆ ಸಮಾರಂಭ ಆರಂಭಗೊಳ್ಳಲಿದೆ. ವೇದಮೂರ್ತಿ ಕುಡುಪು ನರಸಿಂಹ ತಂತ್ರಿ ಶ್ರೀ ವಿಶ್ವೇಶತೀರ್ಥರ ಸಂಸ್ಮರಣೆ ಮಾಡಲಿರುವರು, ಹಾಗೂ ಕರ್ನಾಟಕ ಬ್ಯಾಂಕ್ ನ ಆಡಳಿತ ನಿರ್ದೇಶಕ ಹಾಗೂ ಕಾರ್ಯ ನಿರ್ವಹಣಾಧಿಕಾರಿ ರಾಘವೇಂದ್ರ ಶ್ರೀನಿವಾಸ ಭಟ್ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಿರುವರು.
ಕಟೀಲು ಲಕ್ಷ್ಮೀ ನಾರಾಯಣ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಸಂಸದ ಕ್ಯಾ| ಬೃಜೇಶ್ ಚೌಟ, ಶಾಸಕ ಡಿ.ವೇದವ್ಯಾಸ ಕಾಮತ್, ಶರವು ರಾಘವೇಂದ್ರ ಶಾಸ್ತ್ರಿ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಡಾ. ಎಂ.ಬಿ ಪುರಾಣಿಕ್, ಅಭಯಚಂದ್ರ ಜೈನ್, ರಘುನಾಥ ಸೋಮಯಾಜಿ, ಕಡಂದಲೆ ರಾಜೇಶ್ ರಾವ್ ಚೆನ್ನೈ ಮತ್ತು ಇತರ ಗಣ್ಯರನೇಕರು ಅಭ್ಯಾಗತರಾಗಿ ಪಾಲ್ಗೊಳ್ಳುವರು.
ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸಾಧಕರಿಗೆ "ಪೇಜಾವರ ಶ್ರೀ ವಿಶ್ವೇಶತೀರ್ಥ ಜೀವಮಾನ ಸಾಧನಾ ಪ್ರಶಸ್ತಿ" ನೀಡಿ ಗೌರವಿಸಲಾಗುವುದು.
ಈ ಬಾರಿಯ ಪ್ರಶಸ್ತಿ ಪುರಸ್ಕ್ರರು- ವಿದ್ವಾನ್ ಹೃಷಿಕೇಶ ಬಾಯರಿ, ಬಾರಕೂರು (ವೈದಿಕ ವಿದ್ವಾಂಸರು), ಪೆರ್ಣಂಕಿಲ ಲಕ್ಷ್ಮೀ ನಾರಾಯಣ ಭಟ್ (ಯಜ್ಞಣ್ಣ)(ಪಾಕ ಶಾಸ್ತ್ರಜ್ಞರು), ದಿನೇಶ್ ಭಟ್ ಕದ್ರಿ(ಧಾರ್ಮಿಕ/ವೈದಿಕ ಸೇವೆ), ಡಾ.ಚಂದ್ರಶೇಖರ ದಾಮ್ಲೆ (ಕನ್ನಡ ಸೇವೆ), ಜೇಮ್ಸ್ ವಿನ್ಸೆಂಟ್ ಮೆಂಡೋನ್ಸ(ಸಮಾಜ ಸೇವೆ), ಡಾ. ಎ.ಕೆ ವೆಂಕಟಗಿರಿ ರಾವ್ (ವೈದ್ಯಕೀಯ ಗ್ರಾಮೀಣ ಸೇವೆ), ಉಮೇಶ್ ನಾಥ್ ಜೋಗಿ ಕದ್ರಿ (ಧಾರ್ಮಿಕ ಸೇವೆ), ಎಡಕ್ಕಾನ ಮಹಾಬಲೇಶ್ವರ ಭಟ್ ( ಉದ್ಯಮ/ಸಮಾಜ ಸೇವೆ), ಎರ್ಮಾಳು ಹಿದಾಯತ್ತುಲ್ಲಾ ಸಾಹೇಬ್ (ಶಾಸ್ತ್ರೀಯ ವಾದ್ಯ ಸಂಗೀತ), ಪ್ರೊ.ಎ. ಕೃಷ್ಣಪ್ಪ ಪೂಜಾರಿ ಬೆಳ್ತಂಗಡಿ (ಶಿಕ್ಷಣ/ಧಾರ್ಮಿಕ ಸೇವೆ), ಜನಾರ್ದನ ಹಂದೆ (ಯಕ್ಷಗಾನ ಸಂಘಟಕ), ವಿಶು ಶೆಟ್ಟಿ ಅಂಬಲಪಾಡಿ (ಸಮಾಜ ಸೇವೆ), ಶಿರವಂತೆ ಸುರೇಂದ್ರ ರಾವ್ (ಧಾರ್ಮಿಕ ಸಂಘಟನೆ), ಪಿ.ಡಿ ಶೆಟ್ಟಿ ಮುಂಬೈ (ಕನ್ನಡ ಸೇವೆ), ಬಿ.ವಿಜಯಲಕ್ಷ್ಮೀ ಶೆಟ್ಟಿ (ಮಹಿಳಾ ಸಂಘಟನೆ/ಕನ್ನಡ ಸೇವೆ), ಕಾಂಚನ ಈಶ್ವರ ಭಟ್ ಪುತ್ತೂರು (ಶಾಸ್ತ್ರೀಯ ಸಂಗೀತ), ಮುನಿಯಾಲು ದಾಮೋದರ ಆಚಾರ್ಯ (ಸಾಂಪ್ರದಾಯಿಕ ಸ್ವರ್ಣಶಿಲ್ಪ), ಕವಿತಾ ಶಾಸ್ತ್ರಿ (ಸಮಾಜ ಸೇವೆ/ಶಿಕ್ಷಣ), ಎಂ.ಮಾಧವ ಆಚಾರ್ಯ ಇಜ್ಜಾವು (ಜ್ಯೋತಿಷ ವಿದ್ವಾಂಸರು).
ಪ್ರಶಸ್ತಿ ಪ್ರದಾನ ಸಮಾರಂಭವು ಡಿ. 29, ಸೋಮವಾರ ಅಪರಾಹ್ನ 2-30ಕ್ಕೆ ಕದ್ರಿ ಕಂಬಳ ರಸ್ತೆಯ ಮಲ್ಲಿಕಾ ಬಡಾವಣೆಯಲ್ಲಿರುವ 'ಮಂಜುಪ್ರಾಸಾದ' ನಿಲಯದ ವಾದಿರಾಜ ಮಂಟಪದ ಪೇಜಾವರ ವಿಶ್ವೇಶತೀರ್ಥ ವೇದಿಕೆಯಲ್ಲಿ ಜರಗಲಿರುವುದು ಎಂದು ಕಲ್ಕೂರ ತಿಳಿಸಿದ್ದಾರೆ.
ಕಾರ್ಯಕ್ರಮ: 2-30 ರಿಂದ "ಕೃಷ್ಣ ಗೀತ ಗಾಯನ", 3-30 ರಿಂದ "ವಂದೇ ಮಾತರಂ" ಗೀತೆಗೆ 150 ವರ್ಷ ಸಂದಿರುವ ಸವಿನೆನಪಿಗಾಗಿ ಭಾರತ ಮಾತೆಗೆ ನಮನ
3-45 ರಿಂದ ಸಭಾ ಕಾರ್ಯಕ್ರಮ/ ಪ್ರಶಸ್ತಿ ಪ್ರದಾನ ಮುಂದುವರಿಯುವುದು.