"ಆರೋಗ್ಯವೇ ಭಾಗ್ಯ" ಅಂತಾ ಎಲ್ಲಾರಿಗೂ ತಿಳಿದಿದೆ. ಎಲ್ಲಾ ಭಾಗ್ಯವಿದ್ದು ಆರೋಗ್ಯದ ಭಾಗ್ಯ ವಿಲ್ಲವಾದರೆ ಏನು ಪ್ರಯೋಜನ ಅಲ್ವಾ?ನಮ್ಮ ಆರೋಗ್ಯದ ಮೇಲೆ ನಾವು ಮಾಡುವ ಕೆಲಸ ಸೇವಿಸುವ ಆಹಾರ ನಮ್ಮ ಚಿಂತನ ನಮ್ಮ ವ್ಯಾಯಾಮ ನಾವು ಬದುಕುವ ಪರಿಸರ ಉಡುಗೆ ತೊಡುಗೆಗಳು ಹೀಗೇಯೇ ಇನ್ನೂ ಹಲವು ವಿಷಯಗಳು ಪರಿಣಾಮ ಬೀರುತ್ತದೆ.
ಆರೋಗ್ಯ ಅಂದರೆ ದೈಹಿಕವಾಗಿ ಮಾತ್ರ ಅಲ್ಲ ಆರೋಗ್ಯ ಸಂಪೂರ್ಣವಾಗೋದೇ ದೈಹಿಕವಾಗಿ ಮಾನಸಿಕವಾಗಿ ಆರೋಗ್ಯವಾಗಿ ಇದ್ದಾಗ ಮಾತ್ರ. ಶರೀರ ಮತ್ತು ಮನಸ್ಸು ಒಂದು ನಾಣ್ಯದ ಎರೆಡು ಮುಖಗಳು.ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯ ಅಷ್ಟೇ ಮುಖ್ಯ ನಮ್ಮ ಇಂದಿನ ಬದುಕು ಯಾಂತ್ರಿಕವಾಗಿದೆ ನಾವು ಒತ್ತಡದ ನಡುವೆ ಬದುಕುತ್ತಿದ್ದೇವೆ.ಇಂದಿನ ತಂತ್ರಜ್ಞಾನ ನಮ್ಮನೆಲ್ಲ ಆಲಸಿಗರನ್ನಾಗಿ ಮಾಡಿದೆ.
ಮಾನಸಿಕ ಒತ್ತಡದಿಂದಲೇ ಹೆಚ್ಚಿನ ಕಾಯಿಲೆಗಳು ಬರುತ್ತವೆ.ಮಾನಸಿಕ ರೋಗಿಗಳು ಹೆಚ್ಚುತ್ತಿದ್ದಾರೆ ಖಿನ್ನತೆಯಿಂದ ಬಳಲುವವರ ಸಂಖ್ಯೆ ಅಧಿಕವಾಗಿದೆ.
ಸೂರ್ಯೋದಯಕ್ಕಿಂತ ಮೊದಲು ಎದ್ದು ರಾತ್ರಿ ಬೇಗನೆ ನಿದ್ರೆಗೆ ಶರಣಾಗುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು.4-5 ಮೈಲಿ ನಡೆದರೆ ವ್ಯಾಯಾಮ ಸಿಗುತ್ತದೆ. ಪ್ರತಿನಿತ್ಯ ಸೇವಿಸುವ ಆಹಾರ ಪದಾರ್ಥಗಳ ಮೇಲೆ ದೃಷ್ಟಿ ಹಾರಿಸಿ ಹೊರಗಡೆ ಆಹಾರಕ್ಕಿಂತ ಮನೆಯಲ್ಲಿ ತಯಾರಿಸಿದ ಆಹಾರವೇ ಉತ್ತಮ ಆರೋಗ್ಯಕ್ಕೆ ಮಾನಸಿಕ ಒತ್ತಡ ನಿವಾರಣೆಗೆ ಯೋಗ ಸೂಕ್ತ ಪರಿಹಾರ .ಆದ್ದರಿಂದ ನಾವು ನಿತ್ಯ ಬದುಕಿನಲ್ಲಿ ಯೋಗ ಧ್ಯಾನ ಪ್ರಣಾಯಾಮಾವನ್ನು ಅಳವಡಿಸಿಕೊಳ್ಳಬೇಕು.ಯೋಗ ನಮ್ಮ ದೇಹವನ್ನು ಸದೃಢವಾಗಿಟ್ಟರೆ ಧ್ಯಾನವು ನಮ್ಮ ಮನಸ್ಸನ್ನು ಸದೃಢವಾಗಿಡುತ್ತದೆ.
ಆರೋಗ್ಯ ಕಾಪಾಡಿಕೊಳ್ಳವುದು ಅವರವರ ಜವಾಬ್ದಾರಿ ದೈಹಿಕವಾಗಿಯೂ ಮಾನಸಿಕವಾಗಿಯೂ ಆರೋಗ್ಯ ಇರುವಂತೆ ಕಾಳಜಿವಹಿಸಲೇಬೇಕು. ಆರೋಗ್ಯಪೂರ್ಣ ಬದುಕು ನೆಡೆಸಿದರೆ ನಾವೇ ಭಾಗ್ಯಶಾಲಿಗಳಾಗುತ್ತೇವೆ.
-By ರೇಷ್ಮಾ ಶೆಟ್ಟಿ