ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮದ ಅಮನಬೆಟ್ಟು ಮಹಾವೀರ ವಿದ್ಯಾ ಸಂಸ್ಥೆಯಲ್ಲಿ ಪಂಚಾಯತ್ ಸದಸ್ಯ ರಮೇಶ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಜ್ಞಾ ಯುವಕ, ಯುವತಿ ಮಂಡಲ ಹಾಗೂ ಸಾಯಿ ಮಾರ್ನಾಡ್ ಸದಸ್ಯರುಗಳು ಹಾಜರಿದ್ದರು.

ತರುವಾಯ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತರಬೇತುದಾರ, ಸಂಪನ್ಮೂಲ ವ್ಯಕ್ತಿ, ಪತ್ರಿಕಾ ವರದಿಗಾರ ರಾಯಿ ರಾಜಕುಮಾರ ಮೂಡುಬಿದಿರೆ ಯವರು ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ನಿಷೇಧದ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಉಪನ್ಯಾಸಕ ಭಾಸ್ಕರ್ ದೇವಾಡಿಗ ಉತ್ತಮ ಕೆಲಸದ ಧರ್ಮದಿಂದ ಸಮಾಜದ ಏಳಿಗೆ ಸಾಧ್ಯ ಎಂದರು. ಸಾಯಿ ಮಾರ್ನಾಡ್ ನ ಅಧ್ಯಕ್ಷ ಯತೀಶ್, ಪಾಡಿಮನೆ ಯತೀಂದ್ರ ರಾವ್, ನಿವೃತ್ತ ಶಿಕ್ಷಕ ಜಯ,  ಯುವಕ ಮಂಡಲದ ಅಧ್ಯಕ್ಷ ವೈಷ್ಣವ ಹೆಗ್ಡೆ, ಪ್ರಜ್ಞಾ ಯುವತಿ ಮಂಡಲದ ಅಧ್ಯಕ್ಷೆ ಶೋಭಾ, ಸಂಧ್ಯಾ ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಶಿಕ್ಷಕಿಯರಾದ ಹೇಮಾವತಿ ಸ್ವಾಗತಿಸಿದರು. ಸುನಿತಾ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯ ಶಿಕ್ಷಕಿ ಪ್ರತಿಭಾ ವಂದಿಸಿದರು.