- By ಅಂಜಲಿ ಶಿದ್ಲಿಂಗ್
ಹುಬ್ಬಳ್ಳಿ

ಹೆಣ್ಣಿಗೆ ಹೆಣ್ಣೆ ಶತ್ರು ಎನ್ನುವ ನಾಣ್ಣುಡಿ ಇದೆ ಆ ಮಾತು ನಮ್ಮ ಕಣ್ಮುಂದೆ ಅನೇಕ ಸಾರಿ ಸಾಬೀತು ಕೂಡ ಆಗಿರುತ್ತದೆ. ಅಸೂಯೆಯ ಇನ್ನೊಂದು ಹೆಸರು ಹೆಣ್ಣು ಅಂತನು ಇರುತ್ತದೆ. ಹೆಣ್ಣಿಗೆ ಅವಳದ್ದೆ ಪುಟ್ಟ ಪ್ರಪಂಚ ಅಲ್ಲಿ ತನ್ನ ಕುಟುಂಬ ತಾನು ಅಷ್ಟೆ ಅವರ ಮಧ್ಯೆ ಮೂರನೆಯವರು ಅವಳಿಗೆ ಅಸಹನಿಹವಾದದ್ದು ಅಂತಾನು ಹೇಳಬಹುದು. ಅನೇಕ ಸಾರಿ ಅತ್ತೆ ಸೊಸೆ ಅತ್ತಿಗೆ ನಾದಿನಿಗಳ ಮಧ್ಯನು ಮನಸ್ತಾಪಗಳರತ್ತವೆ.ಇಂತಹ ಸಾಕಷ್ಟು  ಘಟನೆಗಳಿವೆ. ಒಬ್ಬ ಹೆಣ್ಣು ತನ್ನ ಕುಟುಂಬಕ್ಕೊಸ್ಕರ ಬಾಲ್ಯಾವಸ್ಥೆಯಿಂದ ದುಡಿದು ತಂದು ತನ್ನ ಮದುವೆ ಮುಂದೆ ಹಾಕತಾ ಬರತಾಳೆ.ಅವಳಿಲ್ಲದೆ ಮನೆ ಜವಾಬ್ದಾರಿ ಹೊರುವುದು ಯಾರು ಎಂದು ಎಲ್ಲರೂ ತಮ್ಮ ತಮ್ಮ ಕಾಲ ಮೇಲೆ ನಿಂತ ಮೇಲೆ ಕುಟುಂಬದವರ ಇಚ್ಛೆಯಂತೆ ಮದುವೆ ಕೂಡ ಆಗುತ್ತದೆ. ಅವಳ ದುರಾದೃಷ್ಟ ಮದುವೆಯಾದ ಕೆಲವು ವರ್ಷಗಳಲ್ಲಿ ವಿಧವೆಯಾಗಿ ಮತ್ತೆ ತವರು ಸೇರುತ್ತಾಳೆ ತವರು ಮೊದಲಿನಂತಿಲ್ಲ. ಸ್ವಾಗತಿಸುವವರಿಲ್ಲ ಮರು ಮದುವೆಗೆ ಅವಳಿಗೆ ಮನಸ್ಸಿಲ್ಲ ಮನೆಯವರು ಬಲವಂತನು ಮಾಡುವುದಿಲ್ಲ...ದಿನಗಳೂರುತಾ ಹೋದವು ಗುಲಾಮಳಂತೆ ದುಡಿದಳು
ಮುಪ್ಪಾವಸ್ಥೆಯಲ್ಲಿ ಅವಳಿಗೆ ತವರಲ್ಲಿ  ಜಾಗವಿಲ್ಲ...ಮನೆಯಿಂದ ಹೊರ ಹಾಕುವಾಗ ಕೈಯಲ್ಲಿ ಎತ್ತಿ ಆಡಿ ಬೆಳಸಿದ ಅಣ್ಣನ ಮಗಳು ಮಂಥರೆಯಂತೆ ನಗುತ್ತಿದ್ದಳು...ನಿಜ ಆಗ ಅನಿಸಿದ್ದು ಹೆಣ್ಣಿಗೆ ಹೆಣ್ಣೆ ಶತ್ರು...
ಇಂತಹ ಘಟನೆಗಳ ಮಧ್ಯೆಯೂ ನನ್ನಲ್ಲಿ ಅಚ್ಚಾಗಿ ಉಳಿದ ಅವಳ ಕತೆ..
ಅವಳು ಶ್ವೇತಾ ಅವಳು ಬಾಲ್ಯದಲ್ಲೆ ತಾಯಿಯನ್ನು ಕಳೆದುಕೊಳ್ಳುತ್ತಾಳೆ. ತಂದೆಯ ಹೆಗಲೆ ಆಕೆಗೆ ತಾಯಿಯ ಮಡಿಲು ತಂದೆಯ ಜೊತೆ ಅವರ ವಿಧವೆ ತಂಗಿ ತನ್ನ ಪುಟ್ಟ ಮಗಳ ಜೊತೆ ತವರಲ್ಲಿರುತ್ತಾಳೆ.ಅತ್ತೆ  ತಾಯಿಯ ಪ್ರೀತಿ ಅವಳಿಗೆ ಕೊಡಬಹುದಿತ್ತು ಆದರೆ ಚಿಕ್ಕಂದಿನಿಂದ ಅವಳ ಬಗ್ಗೆ ತಿರಸ್ಕಾರಗಳೆ ಅವಳಿಗೆ ಸಿಗುತ್ತಿತ್ತು...
ಪ್ರತಿ ಹೆಜ್ಜೆಗೂ ಕೊಂಕು ಮಾತುಗಳೆ ಅವಳಿಗೆ ಆಹಾರ.ನಿಂದಿಸದಿದ್ದರೆ ಅವಳಿಗೆ ಆಗುತ್ತಿರಲಿಲ್ಲ ಸಮಾಧಾನ...ಹೀಗೆ ದಿನಗಳೂರುಳಿದವು   ಶಿಕ್ಷಣ ಮುಗಿಸಿ ಪ್ರೀತಿಸಿದವನನ್ನ ಮದುವೆಯಾಗಬೇಕೆಂದು ತಿರ್ಮಾನಿಸುತ್ತಾಳೆ ಆದರೆ ಅವರ ತಂದೆ ಒಪ್ಪದ ಕಾರಣ ಅವರಿಚ್ಛೆಯಂತೆ ತಂದೆಯ ಹೇಳಿದವರನ್ನು ಮದುವೆಯಾಗತಾಳೆ.ಆದರೆ ಈ ವಿಷಯ ಅತ್ತೆ ಮನೆಯವರಿಗೆ ತಿಳಿಸಿ ಈ ಮದುವೆಯಿಂದ ವಿಚ್ಛೆದನ ಪಡೆಯುವಂತೆ ಮಾಡತಾಳೆ...ಅದೆಷ್ಟೊ ವರ್ಷಗಳೆ ಕಳೆದವು...ತಂದೆ ವಿಧಿವಶರಾಗಿದ್ದಾರೆ
ಈವಾಗ ಅವಳ ಅತ್ತೆ ಅನಾರೊಗ್ಯದಿಂದ ಹಾಸಿಗೆ ಹಿಡಿದಿದ್ದಾಳೆ, ಅತ್ತೆಯ ಮಗಳಿಗೆ ದೊಡ್ಡ ಸಂಬಂಧ ಎಂದು ಶ್ರೀಮಂತ ಕುಟುಂಬಕ್ಕೆ ಮದುವೆ ಮಾಡಿ ಕೊಟ್ಟಿದ್ದಾಳೆ.ಅವಳು ತಾಯಿಯನ್ನ ತಿರುಗಿ ಕೂಡ ನೋಡಲ್ಲ.ಅನಾರೊಗ್ಯದ ಅತ್ತೆಯನ್ನು ನೋಡಿಕೊಳ್ಳುತ್ತಿರುವುದು ಅದೇ ಶ್ವೇತಾ...
ಇಷ್ಟೆಲ್ಲ ಮಾಡಿದ ಅವಳ ಮೇಲೆ ನಿನಗೆ ದ್ವೇಷ ಇಲ್ಲವಾ ಎಂದು ಕೇಳಿದರೆ ಅವಳ ಉತ್ತರ ಅದೆಷ್ಟು ಅರ್ಥಪೂರ್ಣ
ಗೊತ್ತು ನಾನೆಂದರೆ ಅವಳಿಗೆ ಮೊದಲಿಂದನು ಆಗಲ್ಲ ನನ್ನ ಮದುವೆನು ಮುರಿಸಿದ್ದು ಇವರೆ ಅಂತನು ಗೊತ್ತು ಈವಾಗ ಅಪ್ಪನು ತಿರಿಕೊಂಡರು...
ಇವತ್ತು ಇದ್ದವರು ನಾಳೆ ಇರಲ್ಲ ಸಾವಿಗೆ ಕರುಣೆ ಇಲ್ಲ ಇಲ್ಲಿ ಯಾವುದು ಶಾಶ್ವತನು ಅಲ್ಲ. ದ್ವೇಷ ಯಾಕೆ ಅಂತ. ಅಷ್ಟಕ್ಕೂ ನನಗೆ ಬಿಟ್ಟು ಅವಳಿಗ್ಯಾರು ದಿಕ್ಕಿಲ್ಲ
ನನಗಾದ್ರೂ ಯಾರ ಇದಾರ ಅವಳನ್ನು ಬಿಟ್ಟು...
ಜೀವ ಇರೊವರೆಗೂ ನನ್ನ ಜವಾಬ್ದಾರಿ ನಾ ಮಾಡ್ತಿನಿ.. ಅಂತ
ಅವಳಲ್ಲಿ ಎಣಿಸಲಾಗದಷ್ಟು ಒಳ್ಳೆತನ ತುಂಬಿತ್ತು...
ಆದರೆ ಕೆಟ್ಟದ್ದು ಮಾತ್ರ ಹುಡುಕುತಿದ್ದರು...
ಹೆಣ್ಣಿಗೆ ಹೆಣ್ಣೆ ಶತ್ರು ಮಾತಿದೆ ನಿಜ ಹೆಣ್ಣಿನ ಮನಸ್ಸು ಹೆಣ್ಣೆ ಅರ್ಥ ಮಾಡಿಕೊಳ್ಳೊಕೆ ಸಾಧ್ಯ ಅಂತಲೂ ಮಾತಿದೆ.
ಹೆಣ್ಣಿಗೆ ಹೆಣ್ಣೆ ಶತ್ರು ಎಂಬುವುದು ಎಷ್ಟು ನಿಜವೊ
ಹೆಣ್ಣಿನ ಮನಸ್ಸು ಹೆಣ್ಣಿಗೆ ಅರ್ಥವಾಗುವುದು ಎಂಬುವುದು ಕೂಡ ಅಷ್ಟೇ ಸತ್ಯ...  ಆಕೆ ಕ್ಷಮೆಯಾಧರಿತ್ರಿಯೂ ಹೌದು, ಹಾಗೆ ಅದನ್ನೆಲ್ಲಾ ಮರೆಯದೆ ಮನಸ್ಸಿನಲ್ಲೆ ಇಟ್ಟುಕೊಳ್ಳುವವಳೂ ಹೌದು. ಅದಕ್ಕೆ ನಾರಿ ಮುನಿದರೆ ಮಾರಿ,ಒಲಿದರೆ ಸ್ವರ್ಗಕ್ಕೆ ದಾರಿ ಎಂಬ ಮಾತುಗಳು ಪ್ರಚಲಿತದಲ್ಲಿವೆ.
ಆದರೆ ಆಕೆ ವಿಶಾಲ ದೃಷ್ಟಿಕೋನದಿಂದ ಆಲೋಚನೆ ಮಾಡಬೇಕಾಗಿದೆ.
ಬೆಂಕಿಯನ್ನು ಆರಿಸುವ ಗಾಳಿ ಕೆಂಡನು ಉರಿಸುತ್ತದೆ
ಅಲ್ವಾ .ಮನೆಗೆ ಸಮಾಜಕ್ಕೆ ಶಾಂತವಾಗಿ ಉರಿವ ದೀಪವಾಗಬೇಕು.ದಹಿಸುವ ಬೆಂಕಿಯಾಗಬಾರದು
ಈಗಿನ ಹೆಣ್ಣು ತನ್ನ ಪ್ರಬುದ್ಧ ವಿಚಾರಗಳಿಂದ ಹೆಣ್ಣಿಗೆ ಹೆಣ್ಣೆ ಶತ್ರು ಎಂಬ ಮಾತು ಅಳಿಸಿ ಹಾಕಬಹುದು ಅವಳು ಮನಸ್ಸು ಮಾಡಬೇಕಷ್ಟೆ...