ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆಪುರಾಣ ಪ್ರಸಿದ್ಧ ಗೋಪಾಲಕೃಷ್ಣ ದೇವಾಲಯದಲ್ಲಿ ಆಗಸ್ಟ್ 16ರಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆ ನೆರವೇರಲಿದೆ. ಏಕಮೇವ ಶ್ರೀ ಕೃಷ್ಣ ವೇಷಧಾರಿಯೇ ಎಲ್ಲ ಮೊಸರು ಕುಡಿಕೆಗಳನ್ನು ಹೊಡೆಯುವ ಅತ್ಯಪೂರ್ವ ವೈಶಿಷ್ಟ್ಯ ಹೊಂದಿದೆ ಮೂಡುಬಿದಿರೆ ಮೊಸರು ಕುಡಿಕೆ ಉತ್ಸವದ್ದು. 
ಕಳೆದ 39 ವರ್ಷಗಳಿಂದ ಸಂಭ್ರಮದಿಂದ ನಡೆಯುತ್ತಿರುವ ಮೊಸರು ಕುಡಿಕೆ ಉತ್ಸವಕ್ಕೆ ಕಳೆ ನೀಡುತ್ತಿರುವ ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ಅವರ 34ನೇ ವರ್ಷದ ಕಾರ್ಯಕ್ರಮ ಈ ವರ್ಷ ನಡೆಯುತ್ತಿದೆ. ಮೂಡುಬಿದಿರೆ ಪರಿಸರದ ಸಾವಿರಾರು ಮಂದಿ ಜಮಾಯಿಸಿ ಕಣ್ತುಂಬಿ ಕೊಳ್ಳುತ್ತಿರುವ ಈ ಕಾರ್ಯಕ್ರಮ ಬಹಳ ವಿಶೇಷ ವಿಜ್ರಂಭಣೆಯಿಂದ ನಡೆಯುತ್ತಿದೆ. ತತ್ಸಂಬಂಧಿ ಆಮಂತ್ರಣ ಪತ್ರಿಕೆಯನ್ನು ಜುಲೈ ಒಂದರಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಚೇರ್ಮನ್ ಡಾ. ಮೋಹನ್ ಆಳ್ವ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯ ಚಂದ್ರ ಜೈನ್, ಉದ್ಯಮಿ ಶ್ರೀಪತಿ ಭಟ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ನಿವೃತ್ತ ಜಿಎಂ ಚಂದ್ರಶೇಖರ ರಾವ್ ಬೊಕ್ಕಸ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಫ್ರೆಂಡ್ಸ್ ಸರ್ಕಲ್ ನ ಅಧ್ಯಕ್ಷ ಸಂತೋಷ್ ಕುಮಾರ್, ಸಂಚಾಲಕ ಸುರೇಶ್ ರಾವ್, ಪ್ರಧಾನ ಕಾರ್ಯದರ್ಶಿ ಸುಶಾಂತ್ ಕರ್ಕೇರ, ಉಪಾಧ್ಯಕ್ಷ ಸತೀಶ ಭಂಡಾರಿ, ಕೋಶಾಧಿಕಾರಿ ಶಿವನಂದ ಶಾಂತಿ ಹಾಗೂ ಎಲ್ಲಾ ಸದಸ್ಯರೂ ಹಾಜರಿದ್ದರು. ರಾಯಿ ರಾಜಕುಮಾರ ಮೂಡುಬಿದಿರೆ ಸ್ವಾಗತಿಸಿದರು. ಕೆ.ವಿ.ರಮಣ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.