99 ವರುಷಗಳ ಭೋಗ್ಯಕ್ಕೆ ಸರಕಾರದ ಕಾಡು ಪಡೆದಿದ್ದ ಥಾಮ್ಸನ್ ರಬ್ಬರ್ಸ್ ಕಂಪೆನಿ ಆ ಕಾಡನ್ನು ಅಡವಿಟ್ಟು ಸಾಲ ಮಾಡಿದೆ. ಅದನ್ನು ಕಟ್ಟದ್ದರಿಂದ ಬ್ಯಾಂಕು ಸರಕಾರಿ ಕಾಡನ್ನು ಹರಾಜು ಹಾಕಿದೆ ಎಂದು ಅರಣ್ಯ ಮಂತ್ರಿ ಈಶ್ವರ ಖಂಡ್ರೆ ಹೇಳಿದರು.

ಕೊಡಗಿನ 1,601 ಕೋಟಿ ರೂಪಾಯಿ ಸೇರಿ ರಾಜ್ಯದಲ್ಲಿ ಸರಕಾರಿ ಕಾಡು ಭೋಗ್ಯಕ್ಕೆ ಹಾಕಿಕೊಂಡವರಿಂದ 2,000 ಕೋಟಿ ರೂಪಾಯಿ ಬಾಕಿ ಬರಬೇಕಾಗಿದೆ. ಅದರ ವಸೂಲಿಗೆ ಅರಣ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಬಿ. ಪಿ. ರವಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ಸಹ ಸಚಿವರು ತಿಳಿಸಿದರು.