ಲೋಕಾಯುಕ್ತದವರು ನಿನ್ನೆ ಹದಿನಾರು ಕಡೆ ನಡೆಸಿದ ದಾಳಿಯಲ್ಲಿ ಸಿಕ್ಕಿ ಬಿದ್ದ ಭ್ರಷ್ಟರಲ್ಲಿ ಅತಿ ದೊಡ್ಡ ಗಂಟು ಕಳ್ಳ ಎನಿಸಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾವರೆಕೆರೆ ಹೋಬಳಿಯ ಚನ್ನೇನಹಳ್ಳಿಯ ಪಂಚಾಯತ್ ಸದಸ್ಯ ಎಚ್. ಎಸ್. ಸುರೇಶ್.

ಆರು ಕಡೆ ಈತನ ನೆಲೆಗಳ ಮೇಲೆ ದಾಳಿ ನಡೆಯಿತು. 16 ನಿವೇಶನ, ಒಂದು ಬಂಗಲೆ, 7.6 ಎಕರೆ ಕೃಷಿ ಭೂಮಿ, 11.97 ಲಕ್ಷ ನಗದು, 2.11 ಕೋಟಿ ರೂಪಾಯಿ ಚಿನ್ನಾಭರಣ, 2.7 ಕೋಟಿ ರೂಪಾಯಿ ಮೌಲ್ಯದ ವಾಹನಗಳು ಎಂದು ಈ ಪಂಚಾಯತ್ ಸದಸ್ಯ 25 ಕೋಟಿ ರೂಪಾಯಿಯ ಸಂಪತ್ತು ಹೊಂದಿದ್ದಾನೆ.