ವರದಿ ರಾಯಿ ರಾಜಕುಮಾರ
ಗುಂಡ್ಯಡ್ಕದ ಶ್ರೀನಿವಾಸಪುರದಲ್ಲಿರುವ ವಿಠೋಬ ರುಕುಮಾಯಿ ದೇವಾಲಯದಲ್ಲಿ ಜನವರಿ 4 ರಿಂದ 11 ರ ತನಕ ಅಖಂಡ ಭಜನಾ ಸಪ್ತಾಹ ಜರುಗಲಿದೆ. ವಿಠೋಬ ರುಕುಮಾಯಿ ಭಜನಾ ಮಂಡಳಿಯ ವಜ್ರ ಮಹೋತ್ಸವದ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಶೃಂಗೇರಿ ಜಗದ್ಗುರು ಪೀಠಾಧೀಶ್ವರರ ಅನುಗ್ರಹದಂತೆ ಅಖಂಡ ಭಜನಾ ಸಪ್ತಾಹ ಜರುಗಲಿದೆ.


ಜನವರಿ 4ರಂದು ಮಂಗಳೂರು ರಾಧಾಕೃಷ್ಣ ದೇವಾಲಯದ ಎಂ. ಕೇಶವ ಭಟ್ ರವರ ದೀಪ ಪ್ರಜ್ವಲನದ ಮೂಲಕ ಪ್ರಾರಂಭಗೊಳ್ಳುವ ಅಖಂಡ ಭಜನಾ ಸಪ್ತಾಹ ಜನವರಿ 11 ರ ತನಕ ನಡೆಯಲಿದೆ.
ಈ ಅಪೂರ್ವ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಡಿ. 28 ರಂದು ದೇವಸ್ಥಾನದಿಂದ 7 km ವ್ಯಾಪ್ತಿಯಲ್ಲಿ ಭಜನಾ ಮಂಡಳಿಯ ಸ್ಥಾಪಕರ ಮನೆಗಳಿಗೆ ತೆರಳಿ ವಿಶೇಷ ನಗರ ಭಜನೆಯನ್ನು ಕೂಡ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಪಾಂಡುರಂಗ ಸಪ್ಪ್ರೇ, ಕಾರ್ಯದರ್ಶಿ ರಮೇಶ್ ಭಟ್ ಪರಾಡ್ಕರ್, ಭಜನಾ ಮಂಡಳಿಯ ಪ್ರಮುಖರಾದ ನ್ಯಾಯವಾದಿ ಕೆ. ಆರ್. ಪಂಡಿತ್ ತಿಳಿಸಿದರು. ಈ ಸಂದರ್ಭದಲ್ಲಿ ಮೋಘ ರಾಘವ ಭಟ್, ಪ್ರಭಾಕರ ಪರಾಡ್ಕರ್ ಹಾಜರಿದ್ದರು.