ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರು ನಾಲ್ಕರ್ ಕ್ರಾಸ್‌ನ ಲಾಡ್ಜ್‌ನಲ್ಲಿ ತಂಗಿದ್ದ ಶಿರಸಿ ತಾಲೂಕಿನ ಹಿಂದೂ ಗಂಡು, ಮುಸ್ಲಿಂ ಯುವತಿಯ ಮೇಲೆ ಐವರು ಅನೈತಿಕ ಪೋಲೀಸುಗಿರಿ ನಡೆಸಿ ಹಲ್ಲೆ ನಡೆಸಲಾಗಿದೆ.

ಈ ಸಂಬಂಧ ಹಲ್ಲೆಯ ವೀಡಿಯೋ ಜಾಲ ತಾಣಗಳಲ್ಲಿ ಹರಿದಾಡುತ್ತಲೆ ಯುವತಿ ಪೋಲೀಸರಿಗೆ ದೂರು ನೀಡಿದ್ದಾಳೆ. 24ರ ಅಫ್ತಾಬ್ ಮಕ್ಬೂಲ್ ಅಹ್ಮದ್ ಚಂದನಕಟ್ಟೆ ಮತ್ತು 23ರ ಮದಾರ್ ಸಾಬ್ ಮಹ್ಮದ್ ಇಸಾಕ್ ಎಂಬ ಇಬ್ಬರನ್ನು ಪೋಲೀಸರು ಈ ಸಂಬಂಧ ಬಂಧಿಸಿದ್ದಾರೆ. ಹಲ್ಲೆ ನಡೆಸಿ ಪರಾರಿಯಾಗಿರುವ ಇನ್ನೂ ಮೂವರಿಗಾಗಿ ಪೋಲೀಸರು ಬಲೆ ಬೀಸಿದ್ದಾರೆ.