ಪಂಜಾಬಿನ ಭಟಿಂಡ ಸೇನಾ ನೆಲೆಯಲ್ಲಿ ನಾಲ್ವರು ಸೈನಿಕರ ಕೊಲೆ ಸಂಬಂಧ ಮೋಹನ್ ದೇಸಾಯಿ ಎಂಬ ಸೈನಿಕನನ್ನು ಬಂಧಿಸಲಾಗಿದೆ. ಸಲಿಂಗ ಕಾಮಕ್ಕೆ ಒತ್ತಾಯವೆ ನಾನು ಕೊಲೆ ಮಾಡಲು ಕಾರಣ ಎಂದು ದೇಸಾಯಿ ತನಿಖಾಧಿಕಾರಿಗಳ ಎದುರು ಒಪ್ಪಿಕೊಂಡರು.
ಆ ನಾಲ್ವರು ಅನೈಸರ್ಗಿತ ಸಲಿಂಗ ಕಾಮಿಗಳು. ನನ್ನನ್ನು ಅವರ ಜೊತೆಗೆ ಸೇರುವಂತೆ ಕಿರುಕುಳ ನೀಡಿದರು. ಅದಕ್ಕೆ ಕೊಂದು ಹಾಕಿದೆ. ನಾಲ್ವರಲ್ಲಿ ಒಬ್ಬರು ಕೂಡ ಸಾಯದುಳಿಯಬಾರದು ಎಂದು ಅವರು ನಿದ್ರಿಸುತ್ತಿದ್ದಾಗ ಗುಂಡು ಹಾರಿಸಿ ಕೊಂದೆ ಎಂದೂ ಮೋಹನ್ ದೇಸಾಯಿ ಹೇಳಿಕೆ ನೀಡಿರುವನು.