ಮಂಗಳೂರು: ನೆರೆಯ ಕಲ್ಲಾಪು ನಿವಾಸಿ 65ರ ವಾಲ್ಟೇರ್ ಮೋಂತೆರೋ ಅವರು ನಿದ್ದೆಯ ಮಂಪರಿನಲ್ಲಿ ಬಾವಿಗೆ ಬಿದ್ದು ತಲೆಗೆ ಪೆಟ್ಟಾಗಿ ಸಾವಿಗೀಡಾದರು.
ಸಂಜೆ 7 ಗಂಟೆಗೆ ಇಗರ್ಜಿಗೆ ಹೋಗಿ ಬಂದ ಮೋಂತೆರೋ ಮನೆ ಎದುರಿನ ಬಾವಿ ಕಟ್ಟೆಯ ಮೇಲೆ ಕುಳಿತಿದ್ದರು. 7.25 ಗಂಟೆಯ ಹೊತ್ತಿಗೆ ನಿದ್ದೆಯ ಮಂಪರಿನಲ್ಲಿ ಬಾವಿಗೆ ಬಿದ್ದಿದ್ದಾರೆ. ಬಾವಿ ಹೆಚ್ಚು ಆಳ ಇಲ್ಲದ್ದರಿಂದ ಕೂಡಲೆ ಮನೆಯವರು ಅವರನ್ನು ಏಣಿಯ ಮೂಲಕ ಮೇಲೆತ್ತಿ ಆಸ್ಪತ್ರೆಗೆ ಸಾಗಿಸಿದರು. ತಲೆಗೆ ಏಟಾಗಿತ್ತಾದ್ದರಿಂದ ಚಿಕಿತ್ಸೆ ಫಲಿಸದೆ ನಿನ್ನೆ ಅವರು ಕೊನೆಯುಸಿರೆಳೆದರು.