ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ರಿಂದ ಸಲಹೆ ಪಡೆದು ಸೈನ್ಯದ ವಿಷಯದಲ್ಲಿ ಕೈಯಾಡಿಸುವ ಪ್ರಧಾನಿ ಮೋದಿಯವರು ಪುಲ್ವಾಮಾದಲ್ಲಿ ಆದ 40 ಸೈನಿಕರ ಹತ್ಯೆಗೆ ನೇರ ಹೊಣೆಗಾರರು. ಸೈನಿಕರ ಹತ್ಯೆಯ ಜವಾಬ್ದಾರಿಯನ್ನು ಇನ್ನಾದರೂ ಮೋದಿ ಮತ್ತು ದೋವಲ್‌ರು ಹೊರಬೇಕು ಎಂದು ಮಾಜೀ ಸೇನಾ ಮುಖ್ಯಸ್ಥ ಶಂಕರ್ ರಾಯ್ ಚೌಧರಿ ಹೇಳಿದರು.
ಕ್ರಮದಂತೆ ಅಷ್ಟು ಎತ್ತರದಲ್ಲಿ ಸೈನಿಕರಿಗೆ ರಕ್ಷಣಾ ಸಚಿವಾಲಯ ಮತ್ತು ಮೋದಿಯವರ ಸರಕಾರವು ವಿಮಾನ ಒದಗಿಸದೆ ರಸ್ತೆಯಲ್ಲಿ ಹೋಗಲು ಏಕೆ ಹೇಳಿತು? ಪಾಕಿಸ್ತಾನದ ಗಡಿಗೆ ಹತ್ತಿರದಲ್ಲಿ ಅಷ್ಟೋಂದು ವಾಹನದಲ್ಲಿ ಸೈನಿಕರು ನಾನಾ ಸೇನಾ ಸರಂಜಾಮಿನೊಂದಿಗೆ ಕಚ್ಚಾ ರಸ್ತೆಯಲ್ಲಿ ಹೋಗುವಂತೆ ಮಾಡಿದ್ದು ಏಕೆ ಎಂದು ಚೌಧರಿ ಪ್ರಶ್ನಿಸಿದರು.
ಸತ್ಯ ಪಾಲ್ ಮಲಿಕ್ ನೀಡಿದ ಸಂದರ್ಶನವು ಕೇಂದ್ರ ಸರಕಾರದ ಹೊಣೆಗೇಡಿತನವನ್ನು ಹೊರಗೆಳೆದಿದೆ. ಪ್ರಧಾನಿಯವರು ರಾಜ್ಯಪಾಲರಾಗಿದ್ದ ಸತ್ಯ ಪಾಲ್‌ರ ಬಾಯಿ ಮುಚ್ಚಿಸಿದ್ದೇಕೆ? ಕೂಡಲೆ ಮೋದಿಯವರು ಮತ್ತು ದೋವಲ್ ತಮ್ಮ ಹೊಣೆಗಾರಿಕೆಯ ವಿಫಲತೆಯನ್ನು ದೇಶದೆದುರು ಒಪ್ಪಿಕೊಳ್ಳಬೇಕು ಎಂದು ಚೌಧರಿ ಒತ್ತಾಯ ಮಾಡಿದರು.