ಹಿಂದೂ ಉತ್ತರಾಧಿಕಾರಿ ಕಾಯ್ದೆಯಂತೆ ಮೃತ ಮಗನ ಆಸ್ತಿಯ ಮೊದಲ ವಾರಸುದಾರಳು ತಾಯಿ ಆಗಿದ್ದಾಳೆ. ತಾಯಿಯ ಗಂಡ ಬದುಕಿದ್ದರೂ ಆಕೆಯು ಆ ಹಕ್ಕು ಹೊಂದಿದ್ದಾಳೆ ಎಂದು ಕರ್ನಾಟಕ ಹೈಕೋರ್ಟ್ ಗುರುವಾರ ತೀರ್ಪು ನೀಡಿತು.

ನ್ಯಾಯಮೂರ್ತಿ ಎಚ್. ಪಿ. ಸಂದೇಶ್ ಅವರಿದ್ದ ಏಕ ಸದಸ್ಯ ಪೀಠವು ಈ ತೀರ್ಪು ಮಹತ್ವದ ನೀಡಿದೆ. ಸತ್ತಿರುವ ಮಗ ಸಂತೋಷನ ಆಸ್ತಿಯಲ್ಲಿ ತಾಯಿಗೆ ಅಧಿಕಾರ ಇಲ್ಲ ಎಂದು ಅಧೀನ ಕೋರ್ಟು ನೀಡಿದ್ದ ತೀರ್ಪನ್ನು ತಾಯಿ ಟಿ. ಎನ್. ಸುಶೀಲಮ್ಮ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ದುರದೃಷ್ಟಕರ ಸಂಗತಿ ಎಂದರೆ ಅರ್ಜಿದಾರೆ ಸುಶೀಲಮ್ಮ ಸಹ ಇತ್ತೀಚೆಗೆ ಕಾಲ ವಶವಾಗಿದ್ದರು ಎನ್ನಲಾಗಿದೆ.