ಭೋಜಪುರಿ ಚಿತ್ರರಂಗದ ಖ್ಯಾತ ನಟಿ ಆಗಿದ್ದ ಮಿತಾಲಿ ಶರ್ಮಾ ಥಾಣೆ ಪೋಲೀಸರಿಂದ ಕಳ್ಳತನ ಮಾಡಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿ ಈಗ ಆಸ್ಪತ್ರೆಯಲ್ಲಿ ಮಾನಸಿಕ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಂದೊಮ್ಮೆ ಖ್ಯಾತ ನಟಿ ಆಗಿದ್ದ ಈಕೆ ಮುಂದೆ ಅವಕಾಶ ಕಳೆದುಕೊಂಡಳು. ಮಾಡೆಲಿಂಗ್ ಕೂಡ ಬಹುಕಾಲ ನಡೆಯಲಿಲ್ಲ. ಕೆಲಸವಿಲ್ಲದೆ, ಮನೆ ಬಾಡಿಗೆ ಕಟ್ಟಲಾಗದೆ ಬೀದಿಗೆ ಬಿದ್ದಳು ಈ ನಟಿ. ಭಿಕ್ಷೆ ಬೇಡಿದಳು, ಕಳ್ಳತನ ಮಾಡಿದಳು ಎಂಬುದು ಆರೋಪ. ಪೋಲೀಸರ ಮೇಲೂ ಕೈ ಮಾಡಿದ್ದಾಳೆ. ದಿಲ್ಲಿ ಮೂಲದ ಮಿತಾಲಿಯನ್ನು ಪೋಲೀಸರು ಈಗ ಮಾನಸಿಕ ಆರೋಗ್ಯ ಚಿಕಿತ್ಸೆಗೆ ಹಾಕಿದ್ದಾರೆ.