Article By:
ನವೀನ ಹಬೀಬ, ಮುಂಡರಗಿ
ಇದೊಂದು ಸಾಂಪ್ರದಾಯಿಕ ವಿಧಾನವಾಗಿದೆ. ನಮ್ಮ ಮನಸಿನಲ್ಲಿ ಇರುವದನ್ನು ಇತರರು ಸುಲಭವಾಗಿ ತಿಳಿಯಲು ಸಾಧ್ಯವಿಲ್ಲ. ಆದರೆ ನಮ್ಮನ್ನ ನಾವು ಈ ವಿಧಾನದ ಮೂಲಕ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ವೀಕ್ಷಿಸಲು ಮತ್ತು ತಿಳಿಯಲು ಸಾಧ್ಯ.
ಅಂತರವಾಲೋಕನದ ಅರ್ಥ
ಅಂತರಾವಲೋಕನ ಎಂದರೆ ಸ್ವಯಂ ವೀಕ್ಷಿಸು ಎಂದರ್ಥ. ಮತ್ತೊಂದು ಅರ್ಥ ಒಳನೋಟ ಇದರ ಪೂರ್ಣ ಅರ್ಥ ವ್ಯಕ್ತಿ ತನ್ನ ಅಂತರಂಗವನ್ನು ತಾನೇ ವೀಕ್ಷಿಸುವದು ಎಂದರ್ಥ.
ಇನ್ನು ಸರಳವಾಗಿ ಹೇಳಬೇಕೆಂದರೆ ವ್ಯಕ್ತಿ ಸ್ವಯಂ ತಾನೇ ತನ್ನ ಅಂತರಂಗದಲ್ಲಿ ಇಣುಕಿ ಅಥವಾ ಸ್ವಯಂ ತಾನೇ ತನ್ನ ಅವಗುಣಗಳನ್ನು ತಿಳಿದು ಅವುಗಳನ್ನ ಸರಿ ಪಡಿಸಿ ಉತ್ತಮ ಮಾದರಿ ವ್ಯಕ್ತಿಯಾಗುವದು
ಉದಾ :- ಒಬ್ಬ ಶಿಕ್ಷಕ ತರಗತಿಗೆ ಹೋಗಿ ಪಾಠ ಮಾಡಿ ಹೊರಗೆ ಬಂದಮೇಲೆ ತಾನು ಯೋಚಿಸುತ್ತಾನೆ. ಇಂದು ನಾನು ಮಾಡಿದ ಪಾಠ ಬೋಧನೆ ಸರಿಯಾಗಿ ಇತ್ತೋ ಇಲ್ವೋ ಅದರಿಂದ ಅವನು ಸಂತೃಪ್ತಿ ಪಡೆದಿದ್ದಾನೋ ಇಲ್ವೋ ಅಂತ ಯೋಚನೆ ಮಾಡುತ್ತಾನೆ. ಅವನು ಉತ್ತಮ ಪಾಠ ಬೋಧನೆ ಮಾಡಿದ್ದರೆ. ಖುಷಿಯಾಗಿ ಮುಂದೆ ಸಾಗುತ್ತಾನೆ... ಇಲ್ಲವಾದಲ್ಲಿ ಮನಸ್ಸಲ್ಲಿ ಕೊರಗಿ ಇಂದಿನ ನನ್ನ ತರಗತಿ ಸರಿಯಾಗಿ ಹೋಗಿಲ್ಲ ನಾನು ಕೆಲ ತಪ್ಪು ಮಾಡಿದೆ ಮಕ್ಕಳಿಗೆ ನನ್ನ ಪಾಠ ಅರ್ಥ ಆಗಿಲ್ಲ ಎಂದು ತನ್ನ ನ್ಯೂನತೆಗಳನ್ನು ತಿಳಿದು ಮುಂದಿನ ತರಗತಿಗೆ ಉತ್ತಮ ತಯ್ಯಾರಿಯಲ್ಲಿ ಹೋಗಿ ಉತ್ತಮ ಪಾಠ ಬೋಧನೆ ಮಾಡುತ್ತಾನೆ... ಈ ಬದಲಾವಣೆ ಆಗಿದ್ದು ಅಂತರಾವಲೋಕನದಿಂದ ಅವನು ತನ್ನ ಅಂತರಂಗದಲ್ಲಿ ಪ್ರವೇಶಿಸಿ ತನ್ನ ತಪ್ಪುಗಳನ್ನು ತಿಳಿದು ಸರಿ ಪಡಿಸಿ ಮುಂದೆ ಸಾಗಿದ... ಇದನ್ನ ನಾವು ಸ್ವಯಂ ಅವಲೋಕನ ಅಂತೀವಿ.
ಶಿಕ್ಷಣದಲ್ಲಿ ಅಂತರಾವಲೋಕನದ ಉಪಯೋಗ
ಅಂತರಾವಲೋಕನ ವಿಧಾನವು ಶಿಕ್ಷಣ ಕ್ಷೇತ್ರಕ್ಕೆ ಅನೇಕ ಕೊಡುಗೆಗಳನ್ನು ನೀಡಿದೆ ತರಗತಿಯಲ್ಲಿ ಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ಈ ವಿಧಾನ ಹೇಗೆ ಕಾರ್ಯ ಮಾಡುತ್ತೇ ಎಂದು ತಿಳಿಯೋಣ ಬನ್ನಿ.
👉ಶಿಕ್ಷಕ ತನ್ನ ಬೋಧನೆಯಲ್ಲಿ ತಪ್ಪುಗಳನ್ನು ಗುರುತಿಸಿಕೊಂಡು ಆ ತಪ್ಪುಗಳನ್ನು ತಿದ್ದಿಕೊಳ್ಳುವದರಿಂದ ತನ್ನ ಬೋಧನೆಯನ್ನು ಸುಧಾರಿಸಿಕೊಳ್ಳಲು ಇದು ಸಹಾಯಕರಿಯಾಗಿದೆ.
👉ವಿದ್ಯಾರ್ಥಿಗಳಿಗೂ ಈ ವಿಧಾನ ತಿಳಿಯಪಡಿಸಿದರೆ ಅವರು ತಮ್ಮ ತಪ್ಪಿನ ಅರಿವಾಗಿ ತಾವೇ ತಿದ್ದಿಕೊಂಡು ತಮ್ಮ ಕಲಿಕೆಯಲ್ಲಿ ಯಶಸ್ಸು ಕಾಣಬಹುದು.
👉ಇದು ಶಿಕ್ಷಕ ಹಾಗೂ ವಿದ್ಯಾರ್ಥಿಗಳಲ್ಲಿ ಸ್ವಯಂ ಆಸಕ್ತಿ ಸ್ವಯಂ ಶಿಸ್ತು ಸ್ವಯಂ ಅವಲೋಕನ ಸ್ವಯಂ ವಿಮರ್ಶೆ ಮಾಡಿಸಲು ಸಹಾಯಕಾರಿ.
👉ಇದು ಶಿಕ್ಷಕರಿಗೆ ಮಕ್ಕಳಲ್ಲಿ ಇರುವ ಭಾವೋದ್ವೇಗಗಳನ್ನು ತಪ್ಪಿಸುವಂತೆ ಮಾಡಲು ಸಹಾಯಕ.
👉ಇದು ಶಿಕ್ಷಕನ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲುತ್ತದೆ.
ಪ್ರತಿಯೊಬ್ಬ ಶಿಕ್ಷಕರಿಗೂ ಶೈಕ್ಷಣಿಕ ಮನೋವಿಜ್ಞಾನದ ಜ್ಞಾನ ಇರುವದು ಬಹಳ ಅತ್ಯಗತ್ಯ. ಶೈಕ್ಷಣಿಕ ಮನೋವಿಜ್ಞಾನದ ಜ್ಞಾನ ಶಿಕ್ಷಕರಿಗೆ ಮಕ್ಕಳ ಮನಸ್ಥಿತಿ ಪರಿಸ್ಥಿತಿ ಅಸಕ್ತಿ ಅಭಿರುಚಿಯನ್ನು ತಿಳಿದು ಪಾಠ ಮಾಡಲು ಬಹಳ ಸಹಾಯಕಾರಿ.... ಶಿಕ್ಷಕರಿಗೆ ಇದರ ಜ್ಞಾನ ಇದ್ದರೆ ಎಂತಹದೆ ಮಕ್ಕಳು ಇರಲಿ ಅವರನ್ನು ಸರಿ ದಾರಿಗೆ ತಂದು ಉತ್ತಮ ವಿದ್ಯಾರ್ಥಿಯಾಗಿ ಮಾಡಬಹುದು.... ಮನೋವಿಜ್ಞಾನದ ಸಹಾಯದಿಂದ ನಾವು ನಮ್ಮ ಮುಂದೆ ಇರುವ ವ್ಯಕ್ತಿಯ ಮನಸ್ಥಿತಿಯನ್ನು ತುಂಬಾ ಸರಳವಾಗಿ ತಿಳಿಯಬಹುದು...
ನೀವು ಶಿಕ್ಷಕರಾಗಿದ್ದಾರೆ ನಾನು ಒಂದು ಪುಸ್ತಕ ಹೇಳುವೆ ಅದನ್ನ ತೆಗೆದುಕೊಂಡು ಓದಿ ಅದು ನಿಮಗೆ ತುಂಬಾ ಸಹಾಯಕಾರಿಯಾಗುತ್ತದೆ.... ತುಂಬಿದ ತರಗತಿಯಲ್ಲಿ ಮಕ್ಕಳ ಮನಸ್ಸು ಹಿಡಿದು ಒಂದೇ ಕಡೆ ಏಕಾಗ್ರತೆಯನ್ನ ತರಲು ಮನೋವಿಜ್ಞಾನ ಅದ್ಭುತ ಆಯುಧ....
ಪುಸ್ತಕ :- ಡಾ ಹೆಚ್ ವಿ ವಾಮದೇವಪ್ಪ ( ಶೈಕ್ಷಣಿಕ ಮನೋವಿಜ್ಞಾನ )