ಜುಲಾಯಿ ಒಂದರ ಗುರುವಾರ ತೈಲ ಕಂಪೆನಿಗಳು ಅಡುಗೆ ಅನಿಲದ 14.2 ಕಿಲೋ ಸಿಲಿಂಡರ್ ಬೆಲೆಯನ್ನು ರೂ. 25.50 ಏರಿಸಿವೆ.

ಪ್ರತಿ ತಿಂಗಳ ಒಂದನೆಯ ತಾರೀಕು ಬೆಲೆ ಪರಿಷ್ಕರಿಸುವ ದಿನ. ಮೇ ಒಂದು ಚುನಾವಣಾ ಫಲಿತಾಂಶ ಬಂದಿರಲಿಲ್ಲ. ಗಪ್, ಏಪ್ರಿಲ್ ಒಂದು, ಚುನಾವಣೆ ಬಿಸಿ ರೂ. 10 ಕಡಿತ. ಅದಕ್ಕೆ ಮುಂಚಿನ ತಿಂಗಳುಗಳಲ್ಲಿ ಮತ್ತು ಈಗ ಏರಿಕೆ.

ಬೆಂಗಳೂರಿನಲ್ಲಿ 812 ಇದ್ದ ಸಿಲಿಂಡರ್ ದರ ರೂ. 836.50ಕ್ಕೆ ಏರಿತು. ದೆಹಲಿಯಲ್ಲಿ ರೂಪಾಯಿ 809 ಇದ್ದುದು 834.50ಕ್ಕೆ ಜಿಗಿಯಿತು.