ಹಂಗೆರಿಯ ಬುಡಾಪೆಸ್ಟ್‌ನಲ್ಲಿ ನಡೆದ ಮಾಸ್ಟರ್ ಚೆಸ್ ಟೂರ್ನಿಯಲ್ಲಿ ಭಾರತೀಯ ಮೂಲದ ಅಮೆರಿಕದ ಬಾಲಕ ಅಭಿಮನ್ಯು ಮಿಶ್ರಾ ದಾಖಲೆಯೊಡನೆ ಚಾಂಪಿಯನ್ ಎನಿಸಿದರು.

ಅವರು ಜಗತ್ತಿನ ಅತಿ ಕಿರಿಯ ಚೆಸ್ ಗ್ರಾಂಡ್ ಮಾಸ್ಟರ್ ದಾಖಲೆಯನ್ನು ತನ್ನ ಹೆಸರಿಗೆ ಕರೆಸಿಕೊಂಡರು. 2002ರ ಆಗಸ್ಟ್‌ನಲ್ಲಿ ಕಜಕಸ್ತಾನದ ಸರ್ಗೆ ಕರ್ಜಾಕಿನ್ 12 ವರುಷ 7 ತಿಂಗಳಲ್ಲಿ ಅತಿ ಕಿರಿಯ ಗ್ರಾಂಡ್ ಮಾಸ್ಟರ್ ಎನಿಸಿದ್ದರು. ಆ ದಾಖಲೆಯು ಈಗ 12 ವರುಷ 4 ತಿಂಗಳ ಅಭಿಮನ್ಯುರಿಂದ ಪತನವಾಯಿತು.