ಮಂಗಳೂರು ನಗರ ಪೋಲೀಸರು‌ ದಾಳಿ ನಡೆಸಿ ಗಾಂಜಾ ವೈದ್ಯೆ ಸಹಿತ ಇನ್ನೊಬ್ಬನನ್ನು ಬಂಧಿಸಿ ಕುಡಿ ಕತ್ತರಿಸಿಕೊಂಡ (ಹೈಡ್ರೋವಿಡ್) ಗಾಂಜಾ ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಾದ ಅಜ್ಮಲ್ ಟಿ. ಮಂಗಲ್ಪಾಡಿ, ಮಿನು ರಶ್ಮಿ ಇವರಿಂದ 30 ಲಕ್ಷ ಬೆಲೆಬಾಳುವ ಒಂದು ಕಿಲೋ ಮತ್ತು 236 ಗ್ರಾಂ ಹೈಡ್ರೋವಿಡ್ ಗಾಂಜಾ ವಶಕ್ಕೆ ತೆಗೆದುಕೊಳ್ಳಲಾಗಿದೆ. ಹರಿರಾಮ್ ನೇತೃತ್ವದ ಸಿಸಿಬಿ ಪೋಲೀಸು ಪಡೆ ದಾಳಿ ನಡೆಸಿತ್ತು.

ಮುಖ್ಯ ಆರೋಪಿ ಕಾಸರಗೋಡಿನ‌ ನದೀಮ್ ವಿದೇಶದಲ್ಲಿ ತಲೆಮರೆಸಿಕೊಂಡ ವ್ಯಕ್ತಿ ಎನಿಸಿದ್ದಾನೆ. ಈತನ ಗೆಳತಿ ಎನ್ನಲಾದ ವೈದ್ಯೆ ರಶ್ಮಿ ದೇರಳಕಟ್ಟೆಗೆ ಬಂದಾಗ ಮಾಲು ಸಮೇತ ಬಂಧಿಸಲಾಯಿತು.

ಇವರು ಕೊಣಾಜೆ, ಉಳ್ಳಾಲ, ಮಂಗಳೂರು ನಗರ, ಉಪ್ಪಳಗಳಲ್ಲಿ ಗಾಂಜಾ ಮಾರಾಟ ನಡೆಸಿರುವುದಾಗಿ ತಿಳಿದು ಬಂದಿದೆ.