ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 19 ನೇ ಘಟಿಕೋತ್ಸವದಲ್ಲಿ ಭಾಗವಹಿಸಿ, ಉಷಾ ನಾಯಕ್ ಎಂ ಬಿ  ಎ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡದ್ದಕ್ಕಾಗಿ ಗೌರವಾನ್ವಿತ ರಾಜ್ಯಪಾಲರಾದ  ಥಾವರ್ ಚಂದ್ ಗೆಹ್ಲೋಟ್ ಜಿ ರವರ ಅಮೃತ ಹಸ್ತದಿಂದ  ನಗದು ಬಹುಮಾನ (Cash prize), ಮತ್ತು ಪ್ರಮಾಣ ಪತ್ರಗಳನ್ನು ಸ್ವೀಕರಿಸಲಾಯಿತು.  

ಕಾರ್ಯಕ್ರಮದಲ್ಲಿ ಗೌರವಾನ್ವಿತ ನ್ಯಾಯಮೂರ್ತಿ  ಬಿ ಎಸ್ ಪಾಟೀಲ್ ಸರ್ ಲೋಕಾಯುಕ್ತರು, ಕರ್ನಾಟಕ ರಾಜ್ಯ. ಸನ್ಮಾನ್ಯ ಡಾ. ಎಂ ಸಿ ಸುಧಾಕರ್ ಸರ್ ಉನ್ನತ ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರ ಮತ್ತು ಸಮಕುಲಾಧಿಪತಿಗಳು ಕ.ರಾ.ಮು.ವಿ.ವಿ. ಹಾಗೂ ಕುಲಪತಿಗಳಾದ ಪ್ರೊ. ಶರಣಪ್ಪ ಹಲಸೆ, ಮತ್ತು ಕುಲಸಚಿವರುಗಳು ಗಣ್ಯ ಮಾನ್ಯರೆಲ್ಲ ಉಪಸ್ಥಿತರಿದ್ದರು. ಇವರು ಮಂಗಳೂರಿನ ಕೆನರಾ ಕಾಲೇಜು ಹಾಗೂ ಕೆನರಾ ಸಂಧ್ಯಾ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.