ಸದನದ ಬಾವಿಗೆ ಬಂದು ಪ್ರತಿಭಟನೆ ಮಾಡಿದ್ದಲ್ಲದೆ, ಬಜೆಟ್ ಪ್ರತಿ ಹರಿದು ಉಪ ಸಭಾಪತಿಗಳ ಮೇಲೆ ತೂರಿದ ಅಶಿಸ್ತಿಗಾಗಿ ಹತ್ತು ಮಂದಿ ಬಿಜೆಪಿ ಶಾಸಕರನ್ನು ಸಭಾಪತಿ ಯು. ಟಿ. ಖಾದರ್ ಈ ಅವಧಿಗೆ ಅಮಾನತು ಮಾಡಿದರು.
ಸದನ ಕಲಾಪಾಧಿವೇಶನಕ್ಕೆ ನಾಳೆಯೇ ಕೊನೆಯ ದಿನವಾಗಿದೆ. ಮಾಜೀ ಮಂತ್ರಿಗಳಾದ ಅಶೋಕ್, ಅರಗ ಜ್ಞಾನೇಂದ್ರ, ವೇದವ್ಯಾಸ ಕಾಮತ್ ಮೊದಲಾದವರು ಅಮಾನತುಗೊಂಡವರಲ್ಲಿ ಸೇರಿದ್ದಾರೆ.