ಬೆಂಗಳೂರಿನಲ್ಲಿ ಸಭೆ ಸೇರಿದ 26 ಪಕ್ಷಗಳ ನಾಯಕರು ಪ್ರತಿಪಕ್ಷಗಳ ಹೊಸ ಒಕ್ಕೂಟ ಇಂಡಿಯಾ- ಇಂಡಿಯನ್ ನ್ಯಾಶನಲ್ ಡೆವಲಪ್ಮೆಂಟಲ್ ಇನ್ಕ್ಲೂಸಿವ್ ಅಲೈಯನ್ಸ್‌ಗೆ ಚಾಲನೆ ನೀಡಿದರು.

ಇದು ಹಿಂದಿನ ಕಾಂಗ್ರೆಸ್ ನಾಯಕತ್ವದ ಯುಪಿಎ ಬದಲು ಮೂಡಿದೆ. ಸಭೆಯಲ್ಲಿ ಪಡುವಣ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌, ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್, ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮೊದಲಾದ 26 ಪಕ್ಷಗಳ ನಾಯಕರು ಭಾಗವಹಿಸಿದರು.

ಮೈತ್ರಿ ಕೂಟಕ್ಕೆ 11 ಜನರ ಸಮನ್ವಯ ಸಮಿತಿ ರಚನೆ ಆಗಲಿದೆ. ಆ ಮೇಲೆ ಮೈತ್ರಿ ಕೂಟದ ಅಧ್ಯಕ್ಷ ಮತ್ತು ಸಂಚಾಲಕರ ಹೆಸರು ಅಧಿಕೃತ ಆಗಲಿದೆ.