ನವೀನ ಗೋಪಾಲಸಾ ಹಬೀಬ
ಮುಂಡರಗಿ ಗದಗ ಜಿಲ್ಲೆ
ಓದುಗರೇ ನಮ್ಮ ಈ ಜೀವನದಲ್ಲಿ ಬರೋ ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರ ಅನ್ನೋದು ಇದೆ. ಒಂದು ವೇಳೆ ಪರಿಹಾರ ಸಿಗ್ತಾ ಇಲ್ಲಾ ಅಂದ್ರೆ ಅದು ಸಮಸ್ಯೆನೇ ಅಲ್ಲಾ. ಅನ್ನೋದು ನಮ್ಮ ಜನರ ಅಭಿಪ್ರಾಯ. ಆದರೆ ಅದು ಹಾಗಲ್ಲ ನಮ್ಮ ಜನರಿಗೆ ಸಮಸ್ಯೆಗಳಿಗೆ ಸರಿಯಾಗಿ ಪರಿಹಾರ ಪಡ್ಕೋಳೋ ಕಲೆ ಗೊತ್ತಿಲ್ಲ. ಅವರು ಬಂದಿರೋ ಸಮಸ್ಯೆಯನ್ನ ಬೆಟ್ಟವನ್ನಾಗಿ ಮಾಡಿ ಹೆಚ್ಚು ಭಾವುಕರಾಗಿ ತಮ್ಮ ವಿಚಾರ ಮಾಡುವ ಶಕ್ತಿಯನ್ನು ಮುಚ್ಚಿರುತ್ತಾರೆ.ಅದು ಹೇಗೆಂದರೆ ನಾನು ಮಹಾಭಾರತದ ಒಂದು ಸಣ್ಣ ಕಥೆಯನ್ನು ಹೇಳಿ ತಿಳಿಸುವೆ.
ಓದುಗರೇ ಇದು ಒಂದು ಮಹಾಭಾರತದ ಕಥೆ ಮಹಾಭಾರತದಲ್ಲಿ ಪಿತಾಮಹ ಭೀಷ್ಮರು ಅತ್ಯಂತ ಶಕ್ತಿಶಾಲಿ ಯೋಧ. ಅವರ ಶಕ್ತಿಗೇ ಸರಿಸಮ ಮತ್ತೊಬ್ಬರು ಇರಲಿಲ್ಲ. ಅವರು ಕೆಲವು ವಚನಗಳಿಗೆ ಬದ್ಧರಾಗಿ ಅನಿವಾರ್ಯವಾಗಿ ಕೌರವರ ಪರವಾಗಿ ಯುದ್ಧವನ್ನು ಮಾಡುತ್ತಿದ್ದರು. ಹೀಗೆ ಯುದ್ಧ ಆರಂಭ ಆದಮೇಲೆ ಪ್ರತಿದಿನ ಸಂಜೆ ಸೂರ್ಯಸ್ತಾ ಆದಮೇಲೆ ಎಲ್ಲರೂ ತಮ್ಮ ತಮ್ಮ ಶಿಬಿರಗಳಿಗೆ ವಾಪಸ ಮರಳಿದಾಗ ದುರ್ಯೋಧನ ಪಿತಾಮಹರಿಗೆ ಕೋಪದಲ್ಲಿ ಭೀಷ್ಮ ಪಿತಾಮಹ ನೀವು ನಿಮ್ಮ ಪೂರ್ಣ ಶಕ್ತಿಯ ಪ್ರಯೋಗ ಮಾಡುತ್ತಿಲ್ಲ ನಿಮ್ಮ ಮುಂದೆ ಯಾರು ಗೆಲ್ಲಲು ಸಾಧ್ಯವಿಲ್ಲ ನೀವು ಮನಸ್ಸು ಮಾಡಿದರೆ ಈ ಯುದ್ಧ ಮೊದಲನೇ ದಿನವೇ ಪಾಂಡವರ ನಾಶವಾಗಿ ಮುಗಿಯುತ್ತೆ ಆದರೆ ನೀವು ಪೂರ್ತಿ ಶಕ್ತಿ ಪ್ರಯೋಗ ಮಾಡಿ ಯುದ್ಧ ಮಾಡುತ್ತಿಲ್ಲ ನೀವು ನಮಗೆ ಮೋಸ ಮಾಡುತ್ತಿದ್ದೀರಾ ನೀವು ನಮ್ಮ ಪಕ್ಷದಲ್ಲಿ ಇದ್ದು ಪಾಂಡವರಿಗೆ ಸಹಾಯ ಮಾಡುತ್ತಿದ್ದೀರಾ ನಮಗೆ ನಂಬಿಕೆ ದ್ರೋಹ ಮಾಡುತ್ತಿದ್ದೀರಾ ಎಂದು ಏನು ಬೇಕೋ ಅದನ್ನ ಮಾತನಾಡುತ್ತಿದ್ದರು. ಇದು ಪ್ರತಿದಿನ ಸಂಜೆ ಆಗುತ್ತಿತ್ತು. ಹೀಗೆ ಇರುವಾಗ ಒಂದು ದಿನ ದುರ್ಯೋಧನ ಇದೆ ರೀತಿ ಹೆಚ್ಚು ಚುಚ್ಚಿ ಮಾತನಾಡಿದಾಗ ಭೀಷ್ಮರು ಕೋಪದಲ್ಲಿ ಪ್ರತಿಜ್ಞ ಮಾಡುತ್ತಾರೆ. ನಾನು ಗಂಗಾಪುತ್ರ ಭೀಷ್ಮ ವಚನ ಕೊಡುತ್ತೇನೆ ನಾಳೆಯ ಯುದ್ಧದಲ್ಲಿ ಎಲ್ಲಾ ಪಾಂಡವರ ವಧೆಯನ್ನು ಮಾಡುತ್ತೇನೆ ಎಂದು ದುರ್ಯೋಧನಿಗೆ ಮಾತು ಕೊಡುತ್ತಾರೆ. ಅದು ಹೇಗೋ ಪಾಂಡವರು ಇರುವ ಶಿಬಿರಕ್ಕೆ ಸುದ್ದಿ ಮುಟ್ಟುತ್ತದೆ. ಅದು ಪಾಂಡವರ ಪತ್ನಿ ಕೇಳಿ ನೇರವಾಗಿ ಶ್ರೀ ಕೃಷ್ಣರ ಹತ್ತಿರ ಹೋಗಿ ಹೇಳುತ್ತಾಳೆ ಸಖಾ ನಾನು ಏನು ಕೇಳ್ತಾ ಇದ್ದೀನಿ ಇದು ಯುದ್ಧ ನಿಮ್ಮಿಂದ ನಡೀತಾ ಇದೆ ಭೀಷ್ಮರು ನಾಳೆ ನನ್ನ ಗಂಡಂದಿರನ್ನು ವಧೆ ಮಾಡುವ ಪ್ರತಿಜ್ಞಯನ್ನು ಮಾಡಿದ್ದಾರೆ ಎಂದು ಹೇಳುತ್ತಾಳೆ. ಅದಕ್ಕೆ ಕೃಷ್ಣ ಈ ಯುದ್ಧಕ್ಕೆ ಕಾರಣ ನಾನಲ್ಲ ನನ್ನಿಂದನು ಅಲ್ಲಾ ಎಲ್ಲಾ ಅವರವರ ಕರ್ಮದ ಫಲ ಎಂದು ಹೇಳಿ ಈ ಸಮಸ್ಯೆಗೇ ಒಂದು ಉಪಾಯ ಹೇಳಿ ಕೌರವವರ ಶಿಬಿರಕ್ಕೆ ಕರೆದುಕೊಂಡು ಹೋಗಿ ಭೀಷ್ಮರು ಇರುವ ಕೊಠಡಿಗೆ ಕರೆದುಕೊಂಡು ಹೋಗುತ್ತಾರೆ. ಅವಾಗ ಭೀಷ್ಮರು ಧ್ಯಾನ ಮಾಡುತ್ತ ಕೂತಿರುತ್ತಾರೆ. ಅದೇ ಸಮಯದಲ್ಲಿ ಪಾಂಡವರ ಪತ್ನಿ ದ್ರುಪದಿ *ಪ್ರಣಾಮಗಳು ಪಿತಾಮಹ* ಎಂದು ಹೇಳುತ್ತಾಳೆ ಅದನ್ನ ಕೇಳಿ ಪಿತಾಮಹ ಅವಳನ್ನು ನೋಡದೆ *ಅಖಂಡ ಸೌಭಾಗ್ಯವತಿ ಭವ* ಎಂದು ಆಶೀರ್ವಾದ ಮಾಡುತ್ತಾರೆ. ಆ ಆಶೀರ್ವಾದ ಕೊಟ್ಟು ಕಣ್ಣು ತೆರೆದು ನೋಡಿದರೆ ಮುಂದೆ ದ್ರುಪದಿ ಇರುತ್ತಾಳೆ ಅವರಿಗೇ ಏನು ಮಾಡಿದೆ ಎಂದು ಡಿಘಭ್ರಮೆ ಆಯ್ತು ಒಂದು ಕಡೆ ದುರ್ಯೋಧನನಿಗೆ ಪಾಂಡವರ ವಧೆ ಮಾಡುವ ವಚನ ಮತ್ತೊಂದು ಕಡೆ ಪಾಂಡವರ ಪತ್ನಿಗೆ ಅಖಂಡ ಸೌಭಾಗ್ಯವತಿ ಅನ್ನೋ ಆಶೀರ್ವಾದ ಅವರಿಗೇ ಏನು ಮಾಡಬೇಕು ಎಂದು ಅರ್ಥ ಆಗಲಿಲ್ಲ. ಅವಾಗ ಭೀಷ್ಮರಿಗೇ ಇದು ಶ್ರೀ ಕೃಷ್ಣರ ಉಪಾಯ ಎಂದು ತಿಳಿದು ಭೀಷ್ಮರು ಅವರನ್ನೇ ಈ ಸಮಸ್ಯೆಯ ಪರಿಹಾರ ಕೇಳಿದರು ಅದಕ್ಕೆ ಕೃಷ್ಣರು ಅದಕ್ಕೆ ಪರಿಹಾರ ನಿಮ್ಮ ಬಳಿ ಇದೆ ಪಿತಾಮಹ ಎಂದು ಹೇಳುತ್ತಾರೆ. ಅದಕ್ಕೆ ಪಿತಾಮಹರು ಒಪ್ಪಿ ಎಲ್ಲಾ ಪಾಂಡವರನ್ನು ಬರಲು ಹೇಳಿ ಅರ್ಜುನನಿಗೆ ಹೇಳುತ್ತಾರೆ ಅರ್ಜುನ ನಾಳೆ ನೀನು ನನ್ನ ವಧೆ ಮಾಡಬೇಕು ಎಂದು ಅದಕ್ಕೆ ಅರ್ಜುನ ಅದು ಹೇಗೆ ಸಾಧ್ಯ ಪಿತಾಮಹ ಅದು ನನ್ನಿಂದ ಹೇಗೆ ಸಾಧ್ಯ ಎಂದು ಕೇಳಿದಾಗ ಅದಕ್ಕೆ ಅವರು ಹೇಳುತ್ತಾರೆ ನಿಮ್ಮ ಸೈನ್ಯದಲ್ಲಿ ಶಿಖಂಡಿ ಅನ್ನೋ ಯೋಧ ಇದ್ದಾನೆ ಅವಳು ವಾಸ್ತವದಲ್ಲಿ ಶಿಖಂಡಿ ಅವಳು ಯಕ್ಷನ ಸಹಾಯದಿಂದ ಒಂದು ದಿನದ ಗಂಡು ಆಗಿ ಪರಿವರ್ತನೆ ಆಗಿದ್ದಾಳೆ ಅವಳನ್ನು ನನ್ನ ಮುಂದೆ ನಿಲ್ಲಿಸು ನಾನು ಅವಳ ಮುಂದೆ ಶಸ್ತ್ರ ಎತ್ತುವಹಾಗಿಲ್ಲ ನಾನು ಶಸ್ತ್ರ ತ್ಯಾಗ ಮಾಡುತ್ತೇನೆ ನೀನು ಹಿಂದೆಯಿಂದ ನನ್ನ ವಧೆ ಮಾಡು ಎಂದು ಹೇಳುತ್ತಾರೆ. ಇಲ್ಲಿಗೆ ಎಲ್ಲರ ಸಮಸ್ಯೆ ಪರಿಹಾರ.. ಓದುಗರೇ ನಮಗೆ ಈ ಕಥೆಯಲ್ಲಿ ಎರಡು ಶಿಕ್ಷಣ ಸಿಗುತ್ತದೆ...*1 ಸಂಸ್ಕಾರ 2 ಪ್ರತಿಯೊಂದು ಸಮಸ್ಯೆಗು ಪರಿಹಾರ ಇದೆ ಅನ್ನೋದು* ಅದು ಹೇಗೆಂದರೆ
ಪಾಂಡವರ ಪತ್ನಿಯ ಹತ್ತಿರ ಸಂಸ್ಕಾರ ಇತ್ತು ಅದಕ್ಕೆ ಅವಳು ಪಿತಾಮಹರು ಇರುವ ಶಿಬಿರಕ್ಕೆ ಹೋಗಿ ಅವರ ಆಶೀರ್ವಾದ ಪಡೆದು ಅಖಂಡ ಸೌಭಾಗ್ಯವತಿ ಭವ ಅನ್ನೋ ಆಶೀರ್ವಾದ ಪಡೆದು ತನ್ನ ಗಂಡಂದಿರನ್ನು ಕಾಪಾಡಿಕೊಂಡಳು. ಒಂದು ವೇಳೆ ಕೌರವರ ಪತ್ನಿಯರು ಈ ಕಾರ್ಯ ಮಾಡಿದ್ದರೆ. ಅವರು ಭೀಷ್ಮ ಪಿತಾಮಹರ ಹತ್ತಿರ ಅಥವಾ ಶ್ರೀ ಕೃಷ್ಣರ ಹತ್ತಿರ ಹೋಗಿ ಈ ಆಶೀರ್ವಾದ ಪಡೆದಿದ್ದರೆ ಬಹುಷಃ ಕೌರವರು ಜೀವಂತ ಇರುತ್ತಿದ್ದರೋ ಏನೋ.
ಮತ್ತೊಂದು ಶಿಕ್ಷಣ ಪ್ರತಿ ಸಮಸ್ಯೆಗು ಪರಿಹಾರ ಇದೆ ಈ ಜಗತ್ತಿನಲ್ಲಿ ಎಂತಹದ್ದೇ ಸಮಸ್ಯೆ ಇರಲಿ ಅದಕ್ಕೆ ಪರಿಹಾರ ಇದೆ ಅದು ಕೂಡ ನಿಮ್ಮ ಅಕ್ಕ ಪಕ್ಕದಲ್ಲೇ ಇದೆ ಪಿತಾಮಹರು ಸಹ ತಮ್ಮ ವಚನದಲ್ಲಿ ಸಿಕ್ಕುಹಾಕಿಕೊಂಡಿದ್ದರು ಆದರೆ ಅವರಿಗೂ ಪರಿಹಾರ ಸಿಕ್ತು. ಇಷ್ಟೇ ಜೀವನ.
ಧನ್ಯವಾದಗಳು