ಹಳೆಯಂಗಡಿ ಪಡು ಪಣಂಬೂರಿನ ಪುಷ್ಪರಾಜ್ ಅಮೀನ್ ಮನೆಯ ಬಳಿ ದುರ್ವಾಸನೆ ಹರಡಿತ್ತು. ಮುಂಬಯಿ ವಾಸಿ ಅಮೀನ್ ಆಗಾಗ ಬರುವವರು. ಈ ಬಾರಿ ಮನೆಯ ಹಿಂದಿನ ಡ್ರೈನೇಜ್ ಪಿಚ್‌ನಲ್ಲಿ ಹೆಣ ಕಂಡು ಹೌಹಾರಿದರು.
ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮೂಲ್ಕಿಯ 85ರ ಪ್ರಾಯದ ನಾಗಮ್ಮ ಶೆಟ್ಟಿಗಾರ್ ಎಂಬವರ ಶವ ಇದು ಎಂದು ಪೋಲೀಸರು ತಿಳಿಸಿದ್ದಾರೆ.