ಮಂಗಳೂರು: ಸುರತ್ಕ್ ಲ್ ನಲ್ಲಿ ಎನ್ ಐಟಿಕೆ ಎದುರು ಇತ್ತೀಚೆಗೆ ವಿದ್ಯಾರ್ಥಿಗಳ ಮೇಲೆ ಪೊಲೀಸರ ಸಮ್ಮಖದಲ್ಲೆ ರೌಡಿಗಳು ಹಲ್ಲೆ ನಡೆಸಿರುವುದು ಪೊಲೀಸರ ಅಸಾಹಾಯ ಕತೆಯನ್ನು ತೋರಿಸುತ್ತದೆ. ಇದು ಜಿಲ್ಲೆಗೆ ಕಪ್ಪು ಚುಕ್ಕೆಯಾಗಿದೆ ಎಂದು ಶಾಸಕ, ಮಾಜಿ ಸಚಿವ ಯು.ಟಿ. ಖಾದರ್ ಸುದ್ದಿಗೋಷ್ಠಿಯಲ್ಲಿಂದು ಆರೋಪಿಸಿದ್ದಾರೆ ಮತ್ತು ಈ ಬಗ್ಗೆ ರಾಜ್ಯದ ಮುಖ್ಯ ಮಂತ್ರಿ ಹಾಗೂ ಗೃಹ ಸಚಿವರ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.
ಪೊಲೀಸ್ ಇಲಾಖೆ ರಾಜಕೀಯ (ಬಾಸ್ ಗಳ ) ಯಾವುದೇ ಒತ್ತಡಕ್ಕೆ ಮಣಿಯದೆ ಕಾನೂನು ಪಾಲನೆ ಮಾಡಬೇಕು. ಇಲ್ಲದೆ ಹೋದರೆ ಸಮಾಜದಲ್ಲಿ ಅರಾಜಕತೆಗೆ ಕಾರಣವಾಗುತ್ತದೆ. ಅಮಾಯಕರ ಮೇಲೆ ಪೊಲೀಸರ ಎದುರು ಹಲ್ಲೆ ನಡೆಸಲು ರೌಡಿಗಳು ಮುಂದಾಗಿರುವ ಘಟನೆಯಿಂದ ಸಮಾಜ ಘಾತುಕ ಶಕ್ತಿ ಗಳಿಗೆ ಕಾನೂನು ಭಯ ಇಲ್ಲವೆಂದು ತೋರಿಸುತ್ತದೆ. ಈ ಬಗ್ಗೆ ಪೊಲೀಸರು ಸ್ವಯಂ ಪ್ರೇರಿತರಾಗಿ ಪ್ರಕರಣ ಏಕೆ ದಾಖಲಿಸಲಿಲ್ಲ. ತ್ವರಿತವಾಗಿ ಜಾಮೀನು ನೀಡಿ ರೌಡಿಗಳನ್ನು ಏಕೆ ಕಳುಹಿಸಿದ್ದಾರೆ. ಇದರಿಂದ ಜನರು ಲಾಠಿ ಹಿಡಿದು ತಿರುಗಾಡ ಬೇಕಾದ ಪರಿಸ್ಥಿತಿ ನಿರ್ಮಾಣವಾ ದೀತು.ಸಮಾಜ ಘಾತುಕ ಶಕ್ತಿ ಗಳನ್ನು ಮ ಟ್ಟಹಾಕಲು ಪೊಲೀಸ್ ಇಲಾಖೆ ಏಕೆ ಹಿಂಜರಿಯುತ್ತಿದೆ ?ಯಾರ ಒತ್ತಡ ಇತ್ತು.ಪೊಲೀಸರು ಈ ರೀತಿ ರಾಜಕೀಯ ಒತ್ತಡಕ್ಕೆ ಮಣಿದು ರೌಡಿಗಳ ಅಟ್ಟಹಾಸಕ್ಕೆ ಕಡಿವಾಣ ಹಾಕದೆ ಇದ್ದರೆ ಜಿಲ್ಲೆಯ ಜನತೆಗೆ ಯಾವ ಸಂದೇಶ ನೀಡಿದಂತಾಗುತ್ತದೆ. ಸುರತ್ಕಲ್ ಘಟನೆಯ ಬಳಿಕ ವಿದ್ಯಾರ್ಥಿಗ ಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಪೊಲೀಸರಿಂದ ಜಿಲ್ಲಾಡಳಿತ ದಿಂದ ಆಗಬೇಕಿತ್ತು.ರೌಡಿಗಳ ವಿರುದ್ಧ ಕಠಿಣ ಕ್ರಮ ಆಗಬೇಕಾಗಿತ್ತು ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಜಿಲ್ಲಾಡಳಿತ ವಿಫಲವಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇತರ ಕಡೆಗಳಲ್ಲೂ ಸಮಾಜದಲ್ಲಿ ಸಂಶಯ ಮೂಡಿಸುವ ಘಟನೆಗಳು ನಡೆಯುತ್ತಿದೆ.ಉಳ್ಳಾಲದಲ್ಲಿ ಇತ್ತೀಚೆಗೆ ಮತಾಂತರದ ಕರಪತ್ರ ಹರಡಿದ್ದಾರೆ ಎನ್ನುವ ಆರೋಪವೂ ಇಂತಹ ಪ್ರಕರಣಗಳಿಗೆ ಒಂದು ಉದಾಹರಣೆ ಈ ಬಗ್ಗೆ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವ ಕೆಲಸ ಮಾಡಬೇಕಿತ್ತು ಎಂದು ಖಾದರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸದಾಶಿವ ಉಳ್ಳಾಲ, ಸಂತೋಷ್ ಶೆಟ್ಟಿ, ಮುರಳಿ ನರಿಂಗಾನ ಮೊದಲಾದ ವರು ಉಪಸ್ಥಿತರಿದ್ದರು.